ಕನ್ನಡ ಭಾಷೆ ಕಾರ್ಯಾಗಾರ ಆಯೋಜನೆ

23bdvt2
Published on

ಭದ್ರಾವತಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಕಾಲೇಜುಗಳ ಅಧ್ಯಾಪಕರಿಗೆ ಕನ್ನಡ ಭಾಷೆ ಬಗ್ಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ತಿಮ್ಮಪ್ಪ ಹೇಳಿದರು. ಹೊಸಸಿದ್ದಾಪುರದ ಕಸಾಪ ನಿವೇಶನದಲ್ಲಿ 3.80 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಸಾಗುತ್ತಿದೆ. ಸರ್ಕಾರಿ ನೌಕರರು ಒಂದು ದಿನದ ವೇತನ ಹಾಗೂ ನಗರಸಭಾ ಸದಸ್ಯರು ಒಂದು ತಿಂಗಳ ಗೌರವಧನ ನೀಡಿದ್ದಾರೆ. ಪ್ರತಿ ವರ್ಷ ಪರಿಷತ್ ಲೆಕ್ಕಪತ್ರ ಆಡಿಟ್ ಮಾಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪರಿಷತ್ ಕಾರ್ಯ ಚಟುವಟಿಕೆ ಮಾಹಿತಿ ಹಾಗೂ ಪದಾಕಾರಿಗಳ ಪಟ್ಟಿ ಬಿಡಗಡೆಗೊಳಿಸಿ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದ ಅಂಗಡಿಗಳ ನಾಮಫಲಕ ಶೇ. 60ರಷ್ಟು ಕನ್ನಡ ಭಾಷೆಯಲ್ಲಿರಬೇಕು. ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಲ್ಲಂತಹ ಸಿಬ್ಬಂದಿ ನೇಮಕ ಮಾಡಬೇಕು ಎಂದರು. ಪ್ರಮುಖರಾದ ಡಿ.ನಾಗೋಜಿರಾವ್, ಎಂ.ಇ.ಜಗದೀಶ್, ಕಮಲಾಕರ್, ಪ್ರಕಾಶ್, ನಾಗೇಶ್, ನಾಗರತ್ನ ಕೋಠಿ ಸುದ್ದಿಗೋಷ್ಠಿಯಲ್ಲಿದ್ದರು.

ಭದ್ರಾವತಿ ಪರಿಷತ್ ನೂತನ ಪದಾಕಾರಿಗಳು: ಶಾಸಕ ಬಿ.ಕೆ.ಸಂಗಮೆಶ್ವರ(ಗೌರವಾಧ್ಯಕ್ಷ), ಎಚ್.ತಿಮ್ಮಪ್ಪ(ಅಧ್ಯಕ್ಷ), ಎಂ.ಇ.ಜಗದೀಶ್, ಡಿ.ನಾಗೊಜಿ ರಾವ್(ಗೌರವ ಕಾರ್ಯದರ್ಶಿ), ಬಿ.ಕಮಲಾಕರ್, ಬಿ.ಎಸ್.ಪ್ರಕಾಶ್(ಸಂಘಟನಾ ಕಾರ್ಯದರ್ಶಿ), ಬಿ.ಎಚ್.ಪ್ರಶಾಂತ್, ಕೋಡ್ಲು ಯಜ್ಞಯ್ಯ(ಕೋಶಾಧ್ಯಕ್ಷರು) ಆಯ್ಕೆಯಾಗಿದ್ದಾರೆ. ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷರಾಗಿ ಎಚ್.ಬಿ.ಸಿದ್ದರೋಜಿರಾವ್, ಹೊಳೆಹೊನ್ನೂರು ಹೋಬಳಿಗೆ ಎಚ್.ಸಿದ್ಪಪ್ಪ, ಕೂಡ್ಲಿಗೆರೆ ಹೋಬಳಿಗೆ ಎಚ್.ಆರ್.ತೀರ್ಥಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಲ್.ಕೆ.ಲತಾ ಪಾಂಡುರಂಗ, ಎಚ್.ಎಸ್.ಮಾಯಮ್ಮ, ಆಶಾ ಪುಟ್ಟಸ್ವಾಮಿ, ಭಾಗ್ಯಮ್ಮ, ಸಿ.ಜಯಪ್ಪ, ಎಚ್.ಸಂಪತ್ ಕುಮಾರ್, ಬಿ.ಗುರು, ನಾಗೇಶ್, ಪೀಟರ್, ಹಿತೇಶ್ ಜೈನ್, ಎಚ್.ಶೈಲೇಶ್ ಕೋಠಿ ಕಾರ್ಯನಿರ್ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net