

ಚಾಮರಾಜನಗರ: ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಪರಂಪರೆಯನ್ನು ಹೊಂದಿದ್ದು, ಒಂದು ವೈಜ್ಞಾನಿಕ ಭಾಷೆಯಾಗಿದೆ ಎಂದು ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಉಪನ್ಯಾಸಕಿ ಹಾಜಿರಾಬಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 45 ನೇ ದಿನದ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಕುರಿತು ಮಾತನಾಡಿದರು.
ಕನ್ನಡದಿಂದ ಯಾವುದಾದರೂ ಒಂದು ವಿಷಯವನ್ನು ಹೇಳಿದರೆ ಬೇಗ ಅರ್ಥಮಾಡಿಕೊಳ್ಳಬಹುದು. ಅದೇ ವಿಷಯವನ್ನು ಅನ್ಯ ಭಾಷಿಯಲ್ಲಿ ಹೇಳಿದರೆ ಗೊಂದಲ ಉಂಟು ಮಾಡುತ್ತದೆ. ಅಚ್ಚಕಟ್ಟುವಾದ ಕನ್ನಡ ಭಾಷೆಯಲ್ಲಿ ಹೇಳಿದರೆ ಬಹಳ ಸಂತೋಷದಿಂದ ಬೇಗ ಅರ್ಥ ಮಾಡಿಕೊಳ್ಳುತ್ತೇವೆ. ಅದರ ಮೇಲೆ ಕೆಲಸ, ಕಾರ್ಯಗಳನ್ನು ಮಾಡುತ್ತೇವೆ. ನಾವು ಕನ್ನಡ ಭಾಷೆಯಿಂದ ನಾಡು ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದರು.
ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು. ಬೇರೆಯವರಿಗೆ ಕಲಿಸುವ ಮೂಲಕ ಕನ್ನಡವನ್ನು ಉಳಿಸಿ -ಬೆಳೆಸಬೇಕು. ನವೆಂಬರ್ ತಿಂಗಳಿಗೆ ಮಾತ್ರ ಕನ್ನಡಿಗರಾಗಬಾರದು ನಿರಂತರವಾಗಿ ಪ್ರತಿಕ್ಷಣವೂ ಕನ್ನಡಿಗರರಾಗಬೇಕು. ಕನ್ನಡಭಾಷೆ, ಕನ್ನಡ ನುಡಿ, ಕನ್ನಡ ಸಂಸ್ಕೃತಿಯನ್ನು ಹೇಗೆ ಮುಂದುವರೆಸಿಕೊಂಡು ಹೋಗುತ್ತಿದ್ದೀಯಾ ನಮ್ಮ ಕನ್ನಡನಾಡು ಚೆಲುವ ಕನ್ನಡ ನಾಡಾಗಿದೆ ಪಂಪ, ರನ್ನ, ಹೊನ್ನ ಸೇರಿದಂತೆ ಇನ್ನೂ ಅನೇಕ ಮಹನೀಯರು ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶೈಲೇಂದ್ರಕುಮಾರ್, ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ಚಾ.ವೆಂ.ರಾಜ್‌ಗೋಪಾಲ್, ಮಹೇಶ್‌ಗೌಡ, ತಮಿಳು ಸಂಘದ ಜಗದೀಶ್, ಬಸವರಾಜುನಾಯಕ, ಡಾ.ಪರಮೇಶ್ವರಪ್ಪ, ಲಕ್ಷ್ಮೀನರಸಿಂಹ, ಬಾಬು, ಓಂಶಾಂತಿ ಆರಾಧ್ಯ ಮುತ್ತುರಾಜ್ ಇತರರು ಹಾಜರಿದ್ದರು.