ಕನ್ನಡ ಭಾಷೆ ಉಳಿವಿಗಾಗಿ ಕಂಕಣಬದ್ಧರಾಗಿ

ydg03
Published on

ಕೊಡೇಕಲ್: ನಾಡು-ನುಡಿ, ಕನ್ನಡ ಭಾಷೆ ಉಳಿಯುವಿಗಾಗಿ ಪ್ರತಿಯೊಬ್ಬ ಕನ್ನಡಿಗರು ಕಂಕಣ ಬದ್ಧರಾಗಬೇಕು ಎಂದು ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಕರೆ ನೀಡಿದರು.

ಮಂಡ್ಯದಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ನಿಮಿತ್ತ ರಾಜ್ಯಾದ್ಯಂತ ಸಂಚಾರ ಮಾಡಿ ಕೊಡೇಕಲ್‌ಗೆ ಆಗಮಿಸಿದ ರಥ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡು ಮಾತನಾಡಿದ ಅವರು, ಅನೇಕ ಮಹನೀಯರ ಶ್ರಮದ ಫಲವಾಗಿ ಕನ್ನಡ ಭಾಷೆ ಸಮೃದ್ಧವಾಗಿದೆ. ಅತ್ಯಧಿಕ ಜ್ಞಾನಪೀಠ ಪ್ರಶಸ್ತಿ ಒಲಿದಿರುವುದು ನಮ್ಮ ಕನ್ನಡಕ್ಕೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಹೀಗಾಗಿ ಪ್ರತಿಯೊಬ್ಬರೂ ಕನ್ನಡಾಭಿಮಾನ ಬೆಳೆಸಿಕೊಳ್ಳುವ ಮೂಲಕ ನಿತ್ಯ ಜೀವನದಲ್ಲಿ ಕನ್ನಡ ಬಳಸಬೇಕು ಎಂದು ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಸಾಪ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಹುಣಸಗಿಯಿಂದ ಬಲಶೆಟ್ಟಿಹಾಳ, ರಾಜನಕೊಳೂರ ಮಾರ್ಗವಾಗಿ ಕೊಡೇಕಲ್ ಗ್ರಾಮಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆಗೆ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದ ಬಳಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ನಂತರ ನಾರಾಯಣಪುರಗೆ ಬೀಳ್ಕೊಡಲಾಯಿತು.
ತಾಪಂ ಇಒ ಬಸವರಾಜ ಸಜ್ಜನ್, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ರಂಗನಾಥ ದೊರಿ, ಸೋಮಲಿಂಗಪ್ಪ ದೋರಿ, ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ, ಹಣಮಗೌಡ ಮಾಲಿಪಾಟೀಲ್, ಪಿಡಿಒ ಸಂಗಣ್ಣ ನಾಗಬೇನಾಳ, ಎಎಸ್‌ಐ ಸಂಗಣ್ಣ ನಾಲತವಾಡ, ಸೋಮಶೇಖರ ಶಿಂಪಿ, ಹುಣಸಗಿ ಪಪಂ ಸದಸ್ಯ ಶರಣು ದಂಡಿನ, ಗ್ರಾಪಂ ಸದಸ್ಯ ವನಕೇರಪ್ಪ, ಶರಣಯ್ಯಸ್ವಾಮಿ ಹೊಸಮಠ, ಶಿವಕುಮಾರ ಬಂಡೋಳ್ಳಿ, ಚಂದ್ರಶೇಖರ ಹೊಕ್ರಾಣಿ, ಬಿಆರ್‌ಪಿ ಮಹ್ಮದ್ ರಫೀಕ ಮಳ್ಳಿಕರ, ಭೀಮನಗೌಡ ಬೀರಾದಾರ, ಗುರುರಾಜ ಜೋಶಿ, ಬಸನಗೌಡ ಪೊಲೀಸ್ ಪಾಟೀಲ್, ಶರಣಪ್ಪ ಹೂಗಾರ, ಪ್ರಕಾಶ ಬಾಚಿಹಾಳ, ಹಣಮೇಶ ಜೈನಾಪುರ, ಈರಸಂಗಯ್ಯ ಡಂಬಳ, ಸಂಗನಬಸ್ಸು ಪಂಜಗಲ್, ರಾಜಶೇಖರ ಹೊಳಿಕಟ್ಟಿ ಸೇರಿ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net