ಕನ್ನಡ ಭವನಕ್ಕೆ ನಿವೇಶನ ನೀಡಿ

25 hulsur 01
Published on

ಹುಲಸೂರು: ಕರ್ನಾಟಕ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಗಡಿ ಭಾಗದ ತಾಲೂಕಿನಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ನೆಲ, ಜಲ ಹಾಗೂ ಕನ್ನಡ ಭಾಷೆ ಬೆಳವಣಿಗೆಗೆ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಕನ್ನಡ ಭವನ ನಿರ್ಮಿಸಬೇಕು, ಭವನಕ್ಕೆ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಪಿಡಿಒ ಮನವಿ ಸಲ್ಲಿಸಲಾಯಿತು.

ಕಸಾಪ ಪದಾಧಿಕಾರಿಗಳ ನಿಯೋಗದೊಂದಿಗೆ ಗ್ರಾಮ ಪಂಚಾಯಿತಿಗೆ ತೆರಳಿ ಪಿಡಿಒ ಸಂದೀಪ ಬಿರಾದಾರ್‌ಗೆ ಮನವಿ ಸಲ್ಲಿಸಿ, ಕನ್ನಡ ಭಾಷೆ ಬೆಳವಣಿಗೆ, ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪಿಡಿಒ ಸಂದೀಪ ಬಿರಾದಾರ, ಶೀಘ್ರದಲ್ಲಿ ನಿವೇಶನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ಮೇತ್ರೆ, ಬಸವರಾಜ ಪಾಟೀಲ್, ದೀಪಕ ಪಾಟೀಲ್, ಬಸವಕುಮಾರ ಕೌಟೆ, ಬಸವರಾಜ ಬಾಲಕುಂದೆ, ಮಲ್ಲಿಕಾರ್ಜುನ ದೇವಪ್ಪ, ಡಾ.ಧರ್ಮೇಂದ್ರ ಭೋಸ್ಲೆ, ಗುಲಾಮ ಬಡಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net