

ಬೀದರ್: ನಿಜಾಮ್ ಆಳ್ವಿಕೆಯಲ್ಲಿ ಕನ್ನಡ ಉಳಿಸಿ ಬೆಳೆಸಿದ ಶ್ರೇಯ ಡಾ. ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೀದರ್ ಉತ್ತರ ಘಟಕದ ಗೌರವ ಕಾರ್ಯದರ್ಶಿ ಸಂತೋಷ ಮಂಗಳೂರೆ ಹೇಳಿದರು.
ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಡಾ. ಚನ್ನಬಸವ ಪಟ್ಟದ್ದೇವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟದ್ದೇವರು ಹೊರಗೆ ಉರ್ದು ಬೋರ್ಡ್ ಹಾಕಿ, ಒಳಗೆ ಕನ್ನಡ ಕಲಿಸಿದ್ದರು ಎಂದು ಸ್ಮರಿಸಿದರು.
ಅಕ್ಷರ, ಅನ್ನ ದಾಸೋಹದ ಮೂಲಕ ಬಡ ಮಕ್ಕಳ ಭವಿಷ್ಯ ಉಜ್ವಲಗೊಳಿಸಿದ್ದರು. ಸಮಾಜದ ಒಳಿತಿಗೆ ಅವಿರತ ಶ್ರಮಿಸಿದ್ದರು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಡಾ. ಪಟ್ಟದ್ದೇವರು ನಾಡಿನಾದ್ಯಂತ ಬಸವಾದಿ ಶರಣರ ತತ್ವ ಹಾಗೂ ವಚನ ಸಾಹಿತ್ಯದ ಪ್ರಚಾರ ಮಾಡಿದ್ದರು ಎಂದು ಹೇಳಿದರು.
ದೀನ ದಲಿತರು, ಶೋಷಿತರು, ಬಡವರು, ಅಸಹಾಯಕರಿಗೆ ಆಸರೆಯಾಗಿದ್ದರು. ಸಾಮಾಜಿಕ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು.
ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಶಿಕ್ಷಕರಾದ ಸುನೀತಾ ಕಾಜಿ, ಪೂಜಾ ಕಡ್ಡೆ, ನೀಲಮ್ಮ ಗಜಲೆ, ಸುವರ್ಣಾ ಪಾಟೀಲ, ಚಂದ್ರಕಲಾ ಸ್ವಾಮಿ, ಸಾರಿಕಾ ಬಿರಾದಾರ, ಸಪ್ನಾರಾಣಿ ಪಾಟೀಲ, ಪುರುಷೋತ್ತಮ ಮಹೇಂದ್ರಕರ್, ಮಾರುತೆಪ್ಪ ಗೌನಳ್ಳಿ, ಆಕಾಶ ಮೋರೆ, ಪಾರ್ವತಿ ಬಿರಾದಾರ, ಪೂಜಾರಾಣಿ ಇಬ್ರಾಹಿಂಪುರೆ, ಶೈಲಜಾ ಸ್ವಾಮಿ, ಆಶಾ ಬಿ, ಸುಧಾ ಉಪ್ಪೆ ಇದ್ದರು.
ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ನಿರೂಪಿಸಿದರು. ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರು. ಶಿವಕುಮಾರ ಚನಶೆಟ್ಟಿ ವಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ಬೀದರ್ ಉತ್ತರ ಘಟಕ ಹಾಗೂ ಋಷಿಕೇಶ ಶಿಕ್ಷಣ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.