ಕನ್ನಡ ಫಲಕ ಅಳವಡಿಸಲು ಆಗ್ರಹ

4kudachi1
Published on

ಕುಡಚಿ: ಪಟ್ಟಣದ ಎಲ್ಲ ಅಂಗಡಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ನಾಮ ಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕುಡಚಿ ಘಟಕದ ವತಿಯಿಂದ ಉಪತಹಸೀಲ್ದಾರ್ ಎಸ್.ಜಿ.ದೊಡ್ಡಮನಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕುಡಚಿ ಪುರಸಭೆ ವ್ಯಾಪ್ತಿಯ ಅಂಗಡಿ-ಮುಂಗಟ್ಟುಗಳಲ್ಲಿ ಆಂಗ್ಲ ಭಾಷೆಯ ನಾಮಲಕಗಳು ಹೆಚ್ಚಿವೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕರವೇ ಕಾರ್ಯಕರ್ತರು ದೂರಿದರು. ಪಟ್ಟಣದ ಅಂಗಡಿಗಳಲ್ಲಿ ಅಳವಡಿಸಿರುವ ವಿವಿಧ ಭಾಷೆಯ ನಾಮಫಲಕಗಳನ್ನುಫೆ.11ರೊಳಗೆ ತೆರವುಗೊಳಿಸಿ, ಕನ್ನಡ ನಾಮಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕುಡಚಿ ಕರವೇ ಅಧ್ಯಕ್ಷ ಅಮೀನುದ್ದಿನ್ ವಾಟೆ, ಸುಲ್ತಾನ್ ವಾಟೆ, ಐನೂದ್ದೀನ್ ವಾಟೆ, ಮಂಜುನಾಥ ಬೀರಣಗಿ, ಮೌಲಾಲಿ ವಾಟೆ, ಸಂಜೀವ ಬ್ಯಾಕುಡೆ, ವರ್ಧಮಾನ ಶೆಟ್ಟಿ, ಸಾದೀಕ್ ವಾಟೆ, ಶ್ರೀಮಂತ ಗಸ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net