ಕನ್ನಡ ಪ್ರತಿಯೊಬ್ಬರ ಉಸಿರಾಗಲಿ

02
Published on

ಕೊಡೇಕಲ್ : ನಮ್ಮ ಹೆಮ್ಮೆಯ ಕನ್ನಡ ಭಾಷೆ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಹೇಳಿದರು.

ತೀರ್ಥ ಗ್ರಾಮದಲ್ಲಿ ಶನಿವಾರ ಗ್ರಾಮ ಘಟಕದಿಂದ ಹಮ್ಮಿಕೊಂಡ ಕರ್ನಾಟಕ ಸಂಭ್ರಮ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಬಾಷೆಗೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ಇತಿಹಾಸವಿದೆ. ಉದ್ಯೋಗ ಅರಸಿಕೊಂಡು ಬಂದಿರುವ ನೆರೆ ಹೊರೆಯ ರಾಜ್ಯದ ಜನರು ಮಾತ್ರ ನಮ್ಮ ನೆಲದಲ್ಲಿ ವಾಸಿಸುತ್ತಿದ್ದರೂ ಕೂಡ ನಮ್ಮ ಕನ್ನಡಕ್ಕೆ ದ್ರೋಹ ಮಾಡುತ್ತಿದ್ದಾರೆ. ವೇದಿಕೆ ಇದನ್ನು ಎಂದಿಗೂ ಸಹಿಸುವುದಿಲ್ಲ. ಕನ್ನಡ ನೆಲ, ಜಲ ಮತ್ತು ಭಾಷೆಗೆ ಧಕ್ಕೆಯಾದರೆ ಹೋರಾಟ ಮಾಡಲು ನಾವು ಸಿದ್ಧ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಭೀಮನಗೌಡ ಮಾಲಿ ಪಾಟೀಲ್ ಮಾತನಾಡಿದರು. ಭೀಮನಗೌಡ ಮಾಲಿ ಪಾಟೀಲ್, ಭೀಮನಗೌಡ ದಳಪತಿ, ಭೀಮನಗೌಡ ಮನ್ಯಾಳ, ಕರವೇ ತಾಲೂಕು ಗೌರವಾಧ್ಯಕ್ಷ ಶಿವರಾಜ ಹೋಕ್ರಾಣಿ, ಉಪಾಧ್ಯಕ್ಷ ದೇವರಾಜ ಪಾಟೀಲ್, ಮುಖ್ಯಗುರು ವೀರನಗೌಡ ಪಾಟೀಲ್, ರಮೇಶ ನೂಲಿ, ರಮೇಶ ಪೂಜಾರಿ, ಅಮರೇಶ ಅಗ್ನಿ, ಮಲ್ಲು ಕುಂಬಾರ, ಚಿದಾನಂದ, ವಾಸುದೇವ, ಹಣಮಗೌಡ, ಲಾಳೆಸಾಬ್, ಶಾಂತಗೌಡ ಪಾಟೀಲ್, ಎಂ.ಕೆ.ಪಟೇಲ್, ಬಸವರಾಜ ಇದ್ದರು.

ಎಂ.ಕೆ.ಪಟೇಲ್ ವಂದಿಸಿದರು. ದೇವರಾಜ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net