ಕನ್ನಡ ಪುಸ್ತಕ ಓದುವ ಮೂಲಕ ಕನ್ನಡ ಬೆಳೆಸಿ

11 ckm 8
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕಸಾಪದಿಂದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಅವರನ್ನು ಅಭಿನಂದಿಸಲಾಯಿತು. ಡಾ.ಸಿ.ಟಿ.ಜಯದೇವ್, ಸೂರಿ ಶ್ರೀನಿವಾಸ್, ಡಾ.ಜೆ.ಪಿ.ಕೃಷ್ಣೇಗೌಡ, ಸತ್ಯನಾರಾಯಣ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕನ್ನಡವನ್ನು ಬೆಳೆಸಲು ಕನ್ನಡದ ಪುಸ್ತಕಗಳನ್ನು ಹೆಚ್ಚು ಓದುಬೇಕು ಎಂದು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಟಿ.ಜಯದೇವ್ ತಿಳಿಸಿದರು.

ಜಿಲ್ಲಾ ಕನ್ನಡಸಾಹಿತ್ಯ ಪರಿಷತ್‌ನಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ (ಗೊ.ರು.ಚ) ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಗೊ.ರು.ಚನ್ನಬಸಪ್ಪ ಅವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕನ್ನಡದ ನೆಲ, ಜಲ, ಭಾಷೆ ಸಮಸ್ಯೆಗಳ ಪರಿಹಾರದ ಬಗ್ಗೆ ಬೆಳಕು ಚೆಲ್ಲಬೇಕು. ಅರೊಂದಿಗೆ ಹೆಚ್ಚು ಗೋಷ್ಟಿಗಳು , ಚರ್ಚೆಗಳಾಗಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನಗಳಲ್ಲಿ ಊಟದ ಬಗ್ಗೆ ಹೆಚ್ಚು ಚರ್ಚೆಯಾಗದೆ ಜ್ಞಾನ, ವಿಜ್ಞಾನ , ತಂತ್ರಜ್ಞಾನದ ಬೆಳವಣಿಗೆಯ ದೀಪದ ಬೆಳಕಿನಲ್ಲಿ ಕನ್ನಡಭಾಷೆ ಪ್ರಜ್ವಲಿಸಬೇಕು. ಈ ಸಮ್ಮೇಳನದಲ್ಲಿ ಕನ್ನಡವನ್ನು ಅಂತರಾಷ್ಟಿçÃಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಸಮ್ಮೇಳನದಲ್ಲಿ ಚಿಂತನೆ ನಡೆಯಬೇಕು ಎಂದರು.

ಪ್ರಾಧ್ಯಾಪಕ ಸತ್ಯನಾರಾಯಣ ಅಭಿನಂದನಾ ನುಡಿಗಳನ್ನಾಡಿ, ಮಂಡ್ಯದ ಜನತೆಗೆ ನಮ್ಮ ಜಿಲ್ಲೆಯಲ್ಲಿ ಅಖಿಲಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂಬ ಕಾರಣಕ್ಕೆ ಹೆಮ್ಮೆ ಪಟ್ಟುಕೊಂಡರೆ , ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಸಮ್ಮೇಳನದ ನುಡಿ ತೇರನ್ನು ನಮ್ಮ ಜಿಲ್ಲೆಯ ಹೆಮ್ಮೆಯ ಗೋ.ರು.ಚಾ ಎಳೆಯುತ್ತಿದ್ದಾರೆ ಎಂಬುದು ಹರ್ಷತಂದಿದೆ ಎಂದರು.

ಮೂರು ತಲೆಮಾರಿನ ಜನ ಸೇರಿ ಓರ್ವ ನುಡಿ ಸೇವಕನಿಗೆ ಅಭಿನಂದಿಸುತ್ತಿರುವುದು ಸಂತಸ ತಂದಿದೆ. ಲೇಖಕ ತನ್ನ ಜೀವಮಾನದಲ್ಲಿ ನಾಡು, ನುಡಿಗಾಗಿ ತೋರಿಸಿರುವ ಗೌರವಕ್ಕೆ ಪ್ರಶಸ್ತಿಗಳು ಬರಬಹುದು. ಆದರೆ ಸಮ್ಮೇಳನದಂಥಹ ಅಧ್ಯಕ್ಷಿಯ ಪದವಿಯೆಂಬುದು ನಾಡು ನೀಡುವ ನಿಜವಾದ ಗೌರವ ಎಂದು ಹೇಳಿದರು.

ಈಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ಮಕ್ಕಳ ವೈದ್ಯ ಜೆ.ಪಿ.ಕೃಷ್ಣೇಗೌಡ, ಉಪಸ್ಥಿತರಿದ್ದರು. ಸಭಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗೊರುಚ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net