ಕನ್ನಡ ನಾಡು-ನುಡಿ ಭಾಷೆ ಸಂರಕ್ಷಣೆ ಎಲ್ಲರ ಹೊಣೆ

Oplus_131072
Oplus_131072
Published on

ಯಾದಗಿರಿ: ಕನ್ನಡ ನಾಡು-ನುಡಿ ಸಾಹಿತ್ಯ ಸಾಂಸ್ಕೃತಿ ಜಾನಪದ ಕಲೆಯ ಸಂರP್ಷÀಣೆ ಮಹಾದಾಶಯದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡಿದೆ ಎಂದು ಲಿಂಗೇರಿ ಕೋನಪ್ಪ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಗುರಪ್ಪಾಚಾರ್ಯ ವಿಶ್ವಕರ್ಮ ನುಡಿದರು.

ನಗರದ ಜಿ¯್ಲÁ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಜಿ¯್ಲÁ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡ ೧೧೧ನೇ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತು ಕಲೆಯನ್ನು ಬೆಳೆಸಬೇಕೆಂಬ ಸದುz್ದೆÃಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಮಿರ್ಜಾ ಇಸ್ಮಾಯಿಲï ಅವರ ಮಾರ್ಗದರ್ಶನ ಪ್ರೇರಣೆಯಿಂದ ಜನ್ಮ ತಾಳಿದ ಕನ್ನಡ ಸಾಹಿತ್ಯ ಪರಿಷತ್ ವಿದೇಶ ಮತ್ತು ಹೊರ ರಾಜ್ಯಗಳಲ್ಲಿ ಕನ್ನಡದ ಬೆಳವಣಿಗೆಗೆ ಜತೆಗೆ ಗಡಿನಾಡು ಪ್ರದೇಶದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಚನ್ನಯ್ಯ ಮಾಳಿಕೇರಿ, ಮೈಸೂರು ಒಡೆಯರ ಸಾಹಿತ್ಯ ಪ್ರೇಮಿಗಳ ನಾಡು ನುಡಿ ಅಭಿಮಾನಿಗಳ ಶ್ರಮದ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ ಜಾರಿಗೊಂಡಿದೆ. ಅವರು ಕಷ್ಟಪಟ್ಟು ಕಟ್ಟಿರುವ ಈ ಪರಿಷತ್ ಕನ್ನಡದ ಏಳಿಗೆಗೆ ಸದಾ ಸಿದ್ದಿವಿದೆ ಎಂದರು.

ಜಿ¯್ಲÉಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ವಂತ ಕಟ್ಟಡವನ್ನ ಹೊಂದಲು ಸಿದ್ದಪ್ಪ ಹೊಟ್ಟೆ ಅವರ ಶ್ರಮ ಮತ್ತು ಕನ್ನಡಪರ ಚಟುವಟಿಕೆ ಕಾರ್ಯಕ್ರಮಗಳ ಸಂಘಟನೆ ಶ್ಲಾಘನೀಯ ಎಂದು ಹೇಳಿದರು.

ಅಧ್ಯP್ಷÀತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ನಾಲ್ಕು ಜಿ¯್ಲÁ ಸಮ್ಮೇಳನ, ೩೮ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಹೊರ ತರಲಾಗಿದೆ. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಜತೆಗೆ ಕನ್ನಡದ ನಾಡು ನುಡಿ ಬೆಳವಣಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಮನಸ್ಸುಗಳ ಸಹಕಾರ ಮತ್ತು ಮಾರ್ಗದರ್ಶನ ಪರಿಷತ್ ಮೇಲೆ ಸದಾ ಇರಲಿ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯP್ಷÀ ವೆಂಕಟೇಶ ಕಲಕಂಭ ಇದ್ದರು.

ಸುಭಾಸರೆಡ್ಡಿ ಬೀರನೂರ ಸ್ವಾಗತಿಸಿದರು. ವೀರಭದ್ರಯ್ಯ ಮೋಟಾರ ವಂದಿಸಿದರು. ಜಿ¯್ಲÁ ಪ್ರಧಾನ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ ನಿರೂಪಿಸಿದರು. ಸೋಮಶೇಖರ ಮಣ್ಣೂರ, ಬಸವಂತರಾಯ ಗೌಡ ಮಾಲಿಪಾಟೀಲ, ಚೆನ್ನಯ್ಯಸ್ವಾಮಿ, ಚಂದ್ರಶೇಖರ ಅರಳಿ, ಸ್ವಾಮಿದೇವ ದಾಸನಕೇರಿ, ಮಹೇಶ ಪಾಟೀಲ್ ಕಿಲ್ಲನಕೇರ, ಎಸ್.ಬಿ ನಾಟೇಕಾರ, ನೂರಂದಪ್ಪ ಲೇವಡಿ, ಶರಣು ಅಕ್ಕಿ, ಚೆನ್ನಪ್ಪ ಸಾಹು ಠಾಣಗುಂದಿ, ದೇವೇಂದ್ರರಡ್ಡಿ, ಅಯ್ಯಣ್ಣಗೌಡ ಕ್ಯಾಸಪನಳ್ಳಿ, ಮಲ್ಲು ಹಳಕಟ್ಟಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net