ಕನ್ನಡ ನಮ್ಮೆಲ್ಲರ ಹೃದಯದ ಭಾಷೆಯಾಗಲಿ

21kkr2(11-24 salegondu karyakrama
Published on

 ಕಿಕ್ಕೇರಿ : ಕನ್ನಡ ನಮ್ಮೆಲ್ಲರ ಹೃದಯದ ಭಾಷೆಯಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಕೆ.ಎನ್. ಚಂದ್ರಮೋಹನ್ ತಿಳಿಸಿದರು.ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ ಘಟಕ ಗುರುವಾರ ಹಮ್ಮಿಕೊಂಡಿದ್ದ ಶಾಲೆಗೊಂದು ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನಮ್ಮ ಭಾಷೆಗೆ ನಾವೇ ಕುತ್ತು ತಂದಿದ್ದೇವೆ. ಬೇರೆ ಭಾಷೆಗಳನ್ನು ನಾವು ಕಲಿಯಬೇಕು.

ಓದಬೇಕು. ಆದರೆ ತಾಯಿ ನುಡಿ ಮರೆಯಬಾರದು ಎಂದು ಅವರು ಸಲಹೆ ನೀಡಿದರು. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ಕನ್ನಡ ನಾಡು ಕಿರಿದಾಗಲು ನಮ್ಮಲ್ಲಿನ ಭಾಷಾ ಅಂಧತ್ವ, ನಿರಾಭಿಮಾನಗಳೇ ಕಾರಣವಾಗಿವೆ. ಗಡಿಗಳಲ್ಲಿ ಅನ್ಯಭಾಷಾ ಪ್ರಭಾವ, ವಹಿವಾಟುಗಳಲ್ಲಿ ಹೊರ ರಾಜ್ಯದ ಭಾಷೆಗೇ ನಾವು ಹೊಂದಿಕೊಂಡಿದ್ದೇವೆ. ಇದು ವಿಷಾದ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net