ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

ydg08
Published on

ಯಾದಗಿರಿ: ದೌಡಾಸಿ ಬಂದ ಕನ್ನಡದ ಮನಸುಗಳು. ವಯಸ್ಸಿನ ಹಂಗಿಲ್ಲದೆ ಪ್ರಫುಲ್ಲತೆಯಿಂದ ಜತೆಗೂಡಿದ ಕನ್ನಡ ತಾಯಿ ಮಕ್ಕಳು. ಮನೆ ಕರ‍್ಯಕ್ರಮದಂತೆ ಓಡಾಡಿದ ಕಸಾಪ ಪದಾಧಿಕಾರಿಗಳು, ಜಿ¯್ಲÁಡಳಿತದ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು.

ಇದು ನಡೆದಿದ್ದು ಸೋಮವಾರ ನಗರದ ಮೈಲಾಪುರ ಅಗಸಿ ಬಳಿ. ಕಾರಣ, ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಆಗಮಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿದ ಸಂದರ್ಭ.

ಗುರುಮಠಕಲï‌ನಿAದ ಸೋಮವಾರ ಮಧ್ಯಾಹ್ನ ೧ಕ್ಕೆ ನಗರಕ್ಕೆ ಆಗಮಿಸಿದ ಈ ಭವ್ಯ ರಥಕ್ಕೆ ಸ್ವಾಗತ ಕೋರಲು ಜಿ¯್ಲÁ ಕನ್ನಡ ಸಾಹಿತ್ಯ ಪರಿಷತ್ ಅಧ್ಯP್ಷÀ ಸಿದ್ದಪ್ಪ ಹೊಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು, ಕನ್ನಡದ ಅಭಿಮಾನಿಗಳು, ಜಿ¯್ಲÁಡಳಿತದ ಹಿರಿಯ ಅಧಿಕಾರಿಗಳು, ನಗರಸಭೆ ಅಧ್ಯP್ಷÀರು, ಶಾಸಕರು, ವಿವಿಧ ರಾಜಕೀಯ ಪP್ಷÀಗಳ ಮುಖಂಡರು, ಯುವಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಬೆಳಗ್ಗೆ ೧೧ಕ್ಕೆ ಆಗಮಿಸಬೇಕಾಗಿದ್ದ ರಥ ಎರಡು ಗಂಟೆ ತಡವಾಗಿ ಬಂದರೂ ಯಾರು ಜಾಗ ಬಿಟ್ಟು ಕದಲದೇ ಕನ್ನಡದ ಅಭಿಮಾನ ತೊರಿದರು.

ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಉಪಾಧ್ಯಕ್ಷೆ ರುಕಿಯಾ ಬೇಗಂ, ಜಿ¯್ಲÁಧಿಕಾರಿ ಡಾ.ಸುಶೀಲಾ, ಜಿಪಂ ಸಿಇಒ ಲವೀಶ್ ಓರ್ಡಿಯಾ, ಎಸ್ಪಿ ಸಂಗೀತಾ, ಹೆಚ್ಚುವರಿ ಡಿಸಿ ಶರಣಬಸಪ್ಪ ಕೊಟ್ಟೆಪ್ಪಗೊಳ, ಎಸಿ ಡಾ.ಹಂಪಣ್ಣ ಸಜ್ಜನ್ ಸೇರಿ ಅನೇಕರು ಸಕಾಲಕ್ಕೆ ಆಗಮಿಸಿ ಕನ್ನಡದ ರಥಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.

ರಥದೊಂದಿಗೆ ಆಗಮಿಸಿದ್ದ ಡೊಳ್ಳು ಕುಣಿತ ವೇಷಧಾರಿಗಳು, ವಿವಿಧ ವೇಷಧಾರಿಗಳು ಮತ್ತು ಸ್ಥಳೀಯ ಸಂಗೀತ ವಾದ್ಯಗಾರರು ದಾರಿಯುದ್ದಕ್ಕೂ ಸಂಗೀತ ನಿನಾದ ಜನತೆಗೆ ಉಣಬಡಿಸಿದರು. ಕನ್ನಡ ಮಾತೆ ಜೈ, ಜೈ ಕರ್ನಾಟಕ ಮಾತೆ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಮೈಲಾಪುರ ಅಗಸಿ, ಕನಕ ವೃತ್ತ, ಚಕ್ರಕಟ್ಟಾ, ಗಾಂಧಿ ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಯಿತು.

ಅಲ್ಲಿ ಗಾಂಧಿ ಮೂರ್ತಿಗೆ ಗಣ್ಯರು ಮಾಲಾರ್ಪಣೆ ಮಾಡಿ, ಕನ್ನಡ ರಥದ ಮಹತ್ವ, ಸಂಚಾರ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಪ್ರಮುಖರಾದ ಅಯ್ಯಣ್ಣ ಮಾಸ್ಟರ್ ಹುಂಡೆಕಾರ, ಡಾ.ಸಿದ್ದರಾಜ ರಡ್ಡಿ, ಚನ್ನಪ್ಪ ಗೌಡ ಮೊಸಂಬಿ, ಸಿ.ಎಂ. ಪಟ್ಟೆದಾರ, ದೇವರಾಜ ವರ್ಕನಳ್ಳಿ, ಮಹೇಶಗೌಡ ಮುದ್ನಾಳ್, ವೆಂಕಟೇಶ ಕಲಕಂಬಾ, ಮಹೇಶ ಪಾಟೀಲï, ಚನ್ನಯ್ಯ ಸ್ವಾಮಿ, ವೀರಭದ್ರಯ್ಯ ಸ್ವಾಮಿ ಜಾಕಾಮಠ, ಭೀಮರಾಯ ಲಿಂಗೇರಿ, ಹಣಮಂತ ಹೊಸಮನಿ, ಸ್ವಾಮಿದೇವ ದಾಸನಕೇರಿ, ನಾಗೇಂದ್ರ ಜಾಜಿ, ಬಸವರಾಜಪ್ಪ ಸಜ್ಜನ್, ಅಂಬರೀಶ ಜಾಕಾ, ಉತ್ತರಾದೇವಿ ಮಠಪತಿ ಇತರರಿದ್ದರು. ದಾರಿಯೂದ್ದಕ್ಕೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net