

ಚಿಟಗುಪ್ಪ: ಜಗತ್ತಿನಲ್ಲಿ ಕನ್ನಡ ಭಾಷೆ ಸರ್ವ ಶ್ರೇಷ್ಠವಾಗಿದೆ. ಕನ್ನಡವನ್ನು ದೇವಭಾಷೆಯಾಗಿ ಮಾಡಿದ ಕೀರ್ತಿ ಶರಣ ಸಂಕುಲಕ್ಕೆ ಸಲ್ಲುತ್ತದೆ ಎಂದು ಚಿಂತಕ ಶಿವಶಂಕರ ತರನಳ್ಳಿ ಹೇಳಿದರು.
ಕಂದಗೂಳದ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ, ಸಂಸ್ಥಾಪಕ ಲಿಂ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಜನ್ಮದಿನ ಸಮಾರಂಭ ಉದ್ಘಾಟಿಸಿದ ಅವರು, ಶರಣರು ಕನ್ನಡ ಭಾಷೆಗೆ ಆದ್ಯತೆ ನೀಡಿದ್ದರು. ಅನಕ್ಷರಸ್ತ ಶರಣರನ್ನು ಅಕ್ಷರಸ್ತರನ್ನಾಗಿ ಮಾಡಿದ್ದರಿಂದಲೇ ಇಷ್ಟೊಂದು ವಚನಗಳು ನಮಗೆ ದೊರೆಯಲು ಸಾಧ್ಯವಾಗಿದೆ ಎಂದರು.
ಉಪನ್ಯಾಸಕಿ ಇಂದುಮತಿ ಗಾರಂಪಳ್ಳಿ ವಿಶೇಷ ಉಪನ್ಯಾಸ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಧಿಕಾರಿ ಬಸವರಾಜ ಕಾಳಪ್ಪ, ಸಾಹಿತಿ ಗುಂಡಪ್ಪ ಸಂಗಮಕರ್, ಚಂದ್ರಶೇಖರ ತಂಗಾ, ಮುಖ್ಯಗುರು ರೇಖಾ ಮಂಜುನಾಥ ಮಾತನಾಡಿದರು. ಪ್ರಮುಖರಾದ ಬಂಡೆಪ್ಪ ಮೂಲೆಗೆ, ರಾಘವೇಂದ್ರ ಕುಲಕುರ್ಣಿ, ರಮೇಶ ಗೌಡಗಾಂವೆ ಇತರರಿದ್ದರು. ಸಂಗಮೇಶ ಸ್ವಾಗತಿಸಿದರು. ಮಾಹಾದೇವ ಶೆಟಗಾರ ನಿರೂಪಣೆ ಮಾಡಿದರು. ರಾಜು ದೇವಣಿ ವಂದಿಸಿದರು.