ಕನ್ನಡ ಚಿತ್ರಗೀತೆಗಳ ಗಾಯನ

01raju2(srinivasGowda)
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಹಾಗೂ ಅರ್ಜುನ ಸ್ಕೂಲ್ ಆ್ ಮ್ಯೂಸಿಕ್ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಕನ್ನಡ ಚಿತ್ರಗೀತೆ ಗಾಯನ ಹಾಗೂ ಕನ್ನಡೋತ್ಸವ ಕಾರ್ಯಕ್ರಮವನ್ನು ಗಿಟಾರ್ ನುಡಿಸುವ ಮೂಲಕ ಚಲನಚಿತ್ರ ನಿರ್ದೇಶಕ ವೈ.ಆರ್.ಭಾಸ್ಕರ್ ಉದ್ಘಾಟಿಸಿದರು. ಚಾ.ರಂ.ಶ್ರೀನಿವಾಸಗೌಡ, ಸಿ.ಎಂ.ನರಸಿಂಹಮೂರ್ತಿ, ಸಿ.ಎಂಕೃಷ್ಣಮೂರ್ತಿ, ಜಿ.ಎಂ.ಗಾಡ್ಕರ್, ಜ.ಸುರೇಶ್‌ನಾಗ್ ಇತರರಿದ್ದರು.
Published on

ಚಾಮರಾಜನಗರ: ಚಿತ್ರನಟ ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಸಿಗಬೇಕಾದ ಸೂಕ್ತಸ್ಥಾನ ಸಿಗಲಿಲ್ಲ. ಕೂಡಲೇ ರಾಜ್ಯ ಸರ್ಕಾರ ಅವರ ಸ್ಮಾರಕ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಎಚ್ಚರಿಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಚಿತ್ರನಟ ದಿ.ಡಾ.ವಿಷ್ಣುವರ್ಧನ್ ನೆನಪಿನಾರ್ಥ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಅರ್ಜುನ ಸ್ಕೂಲ್ ಆ್ ಮ್ಯೂಸಿಕ್ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಕನ್ನಡ ಚಿತ್ರಗೀತೆಗಳ ಗಾಯನ ಮತ್ತು ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಷ್ಣುವರ್ಧನ್ ಸಿನಿಮಾಗಳ ಮೂಲಕ ನಾಡು, ನುಡಿ, ಸಂಸ್ಕೃತಿ, ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ಸೂಕ್ತಸ್ಥಾನ ನೀಡದಿರುವುದು ವಿಷಾದಕರ ಸಂಗತಿ. ಕೂಡಲೇ ಸರ್ಕಾರ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಚಲನಚಿತ್ರ ನಿರ್ದೇಶಕ ವೈ.ಆರ್.ಭಾಸ್ಕರ್ ಮಾತನಾಡಿ, ವಿಷ್ಣುವರ್ಧನ್ ಸಮಾಜಕ್ಕೆ ಮಾನವೀಯ ಮೌಲ್ಯಯುಳ್ಳ ಚಿತ್ರಗಳನ್ನು ಕೊಡುಗೆ ಕೊಟ್ಟಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಜಿ.ಎಂ.ಗಾಡ್ಕರ್, ಸಿ.ಎಂ.ಕೃಷ್ಣಮೂರ್ತಿ ಮಾತನಾಡಿದರು. ಜಿ.ಪಂ. ಲೆಕ್ಕಾಧಿಕಾರಿ ಎಚ್.ಎಸ್.ಗಂಗಾಧರ್, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜ.ಸುರೇಶ್‌ನಾಗ್, ಗಾಯಕ ಸುಗಂಧರಾಜು, ಗುರುರಾಜು, ಶಿಕ್ಷಕ ನಂಜುಂಡಸ್ವಾಮಿ, ಪರಿಸರ ಪ್ರೇಮಿ ಸಿ.ಎ.ವೆಂಕಟೇಶ್, ಅರ್ಜುನ್ ಸ್ಕೂಲ್ ಆ್ ಮ್ಯೂಸಿಕ್‌ನ ಅರ್ಜುನ್, ಯಣಗುಂಬ ಮಂಜು, ಶ್ರೀಸಾಯಿಮಂಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net