ಕನ್ನಡ ಗೀತೆಗಳ ಸ್ಪರ್ಧೆ

3 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ರಾಜ್ಯೋತ್ಸವ ನಿಮಿತ್ತ ಇಲ್ಲಿನ ಧಾರವಾಡ ಕರೋಕೆ ಸಂಸ್ಥೆ ವತಿಯಿಂದ ಕನ್ನಡ ಗೀತೆಗಳ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಮೈನುದ್ದೀನ ಕಿರವಾಡಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 5 ವರ್ಷಗಳಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಸ್ಪರ್ಧೆಯ ಆಡಿಷನ್ ನ. 5ರಂದು ಎಸ್.ಎಂ.ಎ. ಸಿಂಗಿಂಗ್ ಕರೋಕೆ, 2ನೇ ಮುಖ್ಯ ರಸ್ತೆ, ಅಶ್ವಿನ ನಗರ, ಹಾವೇರಿಯಲ್ಲಿ ಹಾಗೂ ನ. 12 ಮತ್ತು 15ರಂದು ಕೇಸರ್ ಹೋಟೆಲ್ ಕಟ್ಟಡ, ಕೆಇಬಿ ಎದುರು, ವಿದ್ಯಾಗಿರಿ ಧಾರವಾಡ ವಿಳಾಸದಲ್ಲಿ ನಡೆಸಲಾಗುವುದು ಎಂದರು.
ಒಟ್ಟು ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿಭಾವಂತ ಗಾಯಕರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗವುದು. ಅಂತಿಮ ಸ್ಪರ್ಧೆ ನವೆಂಬರ್ ಕೊನೇ ವಾರದಲ್ಲಿ ಏರ್ಪಡಿಸಲಾಗುವುದು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಇದಲ್ಲದೆ ಪ್ರಥಮ ಸ್ಥಾನ ಪಡೆದವರಿಗೆ ಕನ್ನಡ ಗಾನ ಕೌಸ್ತುಭ-2023 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಶಾರೂಖ್ ಮಖಾನದಾರ, ಮೋಹನ ಅರ್ಕಸಾಲಿ, ಫೈರೋಜ್ ಪಠಾಣ, ಅದೃಶ್ ಸಲಕಿನಕೊಪ್ಪ, ಚನ್ನಪ್ಪ ರಾಯಾಪುರ, ಪ್ರೀತಿ ದೊಡ್ಡಮನಿ, ವಿನೋದ ಲಮಾಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net