ಕನ್ನಡ ಗೀತೆ ಗಾಯನ ತರಬೇತಿ

Published on

ಚಾಮರಾಜನಗರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಭ್ಯಾಸಿ ಟ್ರಸ್ಟ್ ಸಂಸ್ಥೆ ವತಿಯಿಂದ ನ.4 ರಿಂದ ನ.13 ರವರೆಗೆ ಕನ್ನಡ ಗೀತ ಗಾಯನ ತರಬೇತಿಯನ್ನು ಆಯೋಜಿಸಲಾಗಿದೆ.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿರುವ ಸಿ.ಆರ್.ಕೆ. ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಹತ್ತು ದಿನಗಳು ಈ ತರಬೇತಿ ನಡೆಯಲಿದೆ. ಶಿಬಿರದಲ್ಲಿ ರಾಗಗಳ ಪರಿಚಯದೊಂದಿಗೆ ಕನ್ನಡ ಹಾಡುಗಳ ತರಬೇತಿಗೊಳಿಸಿ, ಕೊನೆಯ ದಿನ ಜಿಲ್ಲಾ ರಂಗಮಂದಿರದಲ್ಲಿ ವಾದ್ಯಗಾರರೊಂದಿಗೆ ಶಿಬಿರಾರ್ಥಿಗಳಿಂದ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ತರಬೇತಿ ಶುಲ್ಕ ರೂ.500 ಆಗಿರುತ್ತದೆ. ಮಕ್ಕಳು ಮತ್ತು ಎಲ್ಲಾ ವಯೋಮಾನದ ಗಾಯನ ಆಸಕ್ತರು ಸಂಪರ್ಕಿಸಿ: 7411491077 ಮತ್ತು ಹೆಸರು ನೋಂದಾಯಿಸಿಕೊಳ್ಳಲು ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net