ಕನ್ನಡ ಕೃತಿ ಓದಿ ಭಾಷೆ ಬೆಳೆಸಿ

15kdl1c
Published on

ಕುಂದಗೋಳ: ಕನ್ನಡ ಸಾಹಿತ್ಯ ಶ್ರೀಮಂತ ಭಾಷೆಯಾಗಿದೆ. ನಮ್ಮ ಸಾಹಿತಿಗಳ ಪುಸ್ತಕಗಳು, ಕನ್ನಡ ಪತ್ರಿಕೆಗಳು, ಕಾದಂಬರಿಗಳನ್ನು ಯá-ವಕರು, ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಮ್ಮೇಳನ ಸರ್ವಾಧ್ಯಕ್ಷ ಆರ್.ಎಂ. ಹೊನಕೇರಿ ಹೇಳಿದರು.

ತಾಲೂಕಿನ ಕಳಸ ಗ್ರಾಮದ ನ್ಯೂ ಹೈಸ್ಕೂಲ್ ಮೈದಾನದಲ್ಲಿ ಕಸಾಪ ಭಾನá-ವಾರ ಹಮ್ಮಿಕೊಂಡಿದ್ದ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಪಂಪ, ರನ್ನ, ಕುವೆಂಪು ಮೊದಲಾದವರ ಸಾಹಿತ್ಯ ಕೃತಿಗಳನ್ನು ಓದಿದಾಗ ಮಾತ್ರ ನಮ್ಮ ಜ್ಞಾನ ಭಂಡಾರವನ್ನು ತುಂಬಿಸಲು ಸಾಧ್ಯ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು, ಮಾಸಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಖೇದಕರ ಸಂಗತಿ. ನಾವೆಲ್ಲರೂ ಕನ್ನಡ ಬೆಳೆಸಲು ಭಾಷಣ ಮಾಡಿದರೆ ಸಾಲದು, ಕನ್ನಡ ಪುಸ್ತಕಗಳನ್ನು ಓದಿದಾಗ ಅದಕ್ಕೆಗೌರವ ನೀಡಿದಂತಾಗುತ್ತದೆ. ನಾವೆಲ್ಲರೂ ಪರಿಸರವನ್ನು ಸಂರಕ್ಷಿಸಬೇಕು. ಮಳೆ ನೀರನ್ನು ಮಳೆ ನೀರು ಕೊಯ್ಲು ಮೂಲಕ ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ಶುದ್ಧ ನೀರನ್ನು ಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿದ ದೂರದರ್ಶನ ವಿಶ್ರಾಂತ ನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಈ ನಾಡಿಗೆ ಭಾವೈಕ್ಯತೆ ಸಂದೇಶ ಸಾರಿದ ಗುರುಗೋವಿಂದ ಭಟ್, ಸಂತ ಶಿಶುನಾಳ ಶರೀಫರ ಸೌಹಾರ್ದತೆಯ ಸಂದೇಶವನ್ನು ನಾವೆಲ್ಲರೂ ಪಾಲಿಸಿದಾಗ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ಶರೀಫರ ತತ್ವಪದಗಳು ಸರಳವಾಗಿದ್ದು, ಎಲ್ಲರೂ ಅರ್ಥೈಸಿಕೊಳ್ಳುವಂತಿವೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ರದ್ದು ಮಾಡಲಾಗಿದೆ. ಏಪ್ರಿಲ್​ನಲ್ಲಿ ಆಯೋಜಿಸಲಾಗುವುದು ಎಂದರು. ಪ್ರೊ. ಎಫ್.ಬಿ. ಸೊರಟೂರ ಮಾತನಾಡಿದರು. ಕಸಾಪ ಗೌರವಾದ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿ, ಕರೋನಾ ವೈರಸ್​ನಿಂದ ಸಮ್ಮೇಳನವನ್ನು ಸರಳವಾಗಿ ಆಚರಿಸಲಾಗಿದೆ. ಜನರಲ್ಲಿ ಕರೋನಾ ಬಗ್ಗೆ ತಿಳಿವಳಿಕೆ ನೀಡಲಾಗಿದೆ ಎಂದರು.

ವಚನಗಳಿಂದ ಜನಜಾಗೃತಿ: ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಳಸ-ಹತ್ತಿಮತ್ತೂರಿನ ಶ್ರೀ ನಿಜಗುಣ ಶಿವಯೋಗಿ, ಎಲ್ಲರನ್ನೂ ಒಗ್ಗೂಡಿಸá-ವ ಶಕ್ತಿ ವಚನ ಸಾಹಿತ್ಯಕ್ಕಿದೆ. ಅನೇಕ ಶರಣರ ವಚನಗಳು ಸಮಾಜದ ತಪ್ಪುಗಳನ್ನು ತಿದ್ದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸá-ತ್ತವೆ. ಮನಸ್ಸಿಗೆ ಮುದ ನೀಡುವುದೇ ನಿಜವಾದ ಸಾಹಿತ್ಯ. ಇಂದು ಅಶ್ಲೀಲ ಸಾಹಿತ್ಯ ರಾರಾಜಿಸುತ್ತಿದ್ದು, ಇದು ಮನಸ್ಸಿನಲ್ಲಿ ಉಳಿಯುವ ಸಾಹಿತ್ಯವಲ್ಲ. ನಾವೆಲ್ಲರೂ ದಾಸ ಸಾಹಿತ್ಯ, ವಚನ ಸಾಹಿತ್ಯ, ತ್ರಿಪದಿಗಳು, ಮೊದಲಾದವುಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಬಹಳಷ್ಟು ಈಡೇರುವುದಿಲ್ಲ. ಮುಂಬರುವ ಸಾಹಿತ್ಯ ಸಮ್ಮೇಳನದಲ್ಲಿ ಕಳೆದ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಈಡೇರಿದ ಬಳಿಕವೇ ಹೊಸ ನಿರ್ಣಯಗಳನ್ನು ಕೈಗೊಳ್ಳುವಂತಾಗಬೇಕು ಎಂದರು.

ರಾಷ್ಟ್ರ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷ ನಬೀಬಸಾಬ್ ಉಪ್ಪಾರ, ನಾಡಧ್ವಜವನ್ನು ಎಸ್​ಡಿಎಂಸಿ ಅಧ್ಯಕ್ಷ ಮೌಲಾಲಿಸಾಬ್ ಲಾಠಿ, ಪರಿಷತ್ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಎಸ್.ಎನ್. ಅರಳಿಕಟ್ಟಿ ನೆರವೇರಿಸಿದರು. ಬಿ.ಎಸ್. ಪೊಲೀಸ್ ಪಾಟೀಲ ಅವರ ‘ಹಾಡುಗಳ ಸಂಗಮ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಅರವಿಂದ ಕಟಗಿ, ಎಪಿಎಂಸಿ ಅಧ್ಯಕ್ಷ ಬೀರಪ್ಪ ಕುರುಬರ, ಜಿ.ಡಿ. ಘೊರ್ಪಡೆ, ರಾಮನಗೌಡ ಪಾಟೀಲ, ಎಚ್.ಕೆ. ಬಾವಿಕಟ್ಟಿ, ಕೆ.ಎಸ್. ಕೌಜಲಗಿ, ಕುಸುಮಾವತಿ ಕಲ್ಲಣ್ಣವರ, ರೇಣುಕಾ ಅಂಗಡಿ, ನೀಲವ್ವ ಅರಳಿ, ಶಿವಲಿಂಗಮ್ಮ ಅರಳಿ, ಎಸ್.ಕೆ. ಗದಗಿನಮಠ, ಎಚ್.ಎನ್. ಕರೆಮ್ಮನವರ, ಇತರರಿದ್ದರು. ಬಿ.ಎಲ್. ಪಾಟೀಲ ನಿರೂಪಿಸಿದರು. ರಮೇಶ ಅತ್ತಿಗೇರಿ ಸ್ವಾಗತಿಸಿದರು. ಎಂ.ಟಿ. ಅಕ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net