

ಚಿತ್ರದುರ್ಗ: ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸರಸ್ವತಿ ಪುರಸ್ಕಾರ ಹಾ ಗೂ ಕನ್ನಡ ಕುವರಿ ಪ್ರಶಸ್ತಿಗೆ ನಗರದ ಗುಮಾಸ್ತ ಕಾಲನಿ ಬಿ.ವಿ. ರಾಜಕುಮಾರ್-ಬಿ.ವಿ. ಶಿವಲೀಲಾ ಅವರ ಪುತ್ರಿ ಬಿ.ವಿ. ಸಮೃದ್ಧಿ ಭಾಜನರಾಗಿದ್ದಾರೆ. ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಕ್ಕಾಗಿ ಶಿವಲೀಲಾ ಅವರಿಗೆ ಜು. 27ರಂದು ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.