ಕನ್ನಡ ಕಲಿತರೆ ಇತರ ಭಾಷೆ ಕಲಿಯುವುದು ಸುಲಭ

24 CRP 02 - Copy
??????
Published on

ಚನ್ನರಾಯಪಟ್ಟಣ: ಮಾತೃಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತರೆ ಇತರ ಭಾಷೆಗಳನ್ನು ಕಲಿಯಲು ಸುಲಭವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್ ಹೇಳಿದರು.


ತಾಲೂಕಿನ ಹಿರೀಸಾವೆ ಗ್ರಾಮದ ಶಾರದ ಅನಿಕೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ದಿ.ಎಚ್.ಎನ್. ಶ್ರೀನಿವಾಸಯ್ಯ ಸ್ಮರಣಾರ್ಥ ಇತ್ತೀಚೆಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಓದಲು, ಬರೆಯಲು ಸ್ಪಷ್ಟವಾಗಿ ಕಲಿತಾಗ ಇತರ ಭಾಷೆಗಳನ್ನು ಕಲಿಯಲು ಸಹಾಯವಾಗುತ್ತದೆ ಎಂದರು.


ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಪಿ.ಶಂಕರ್ ಮಾತನಾಡಿ, ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಹಿನ್ನೆಲೆಯನ್ನು ತಿಳಿದುಕೊಂಡು ಪಾಠ ಮಾಡಬೇಕು. ಎಲ್ಲ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಸಾಹಿತಿ ಹೊಸೂರು ಪ್ರೊ.ತಮ್ಮಣ್ಣಗೌಡ, ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪ್ರೊ. ನಿಂಬೇಹಳ್ಳಿ, ನಿವೃತ್ತ ಶಿಕ್ಷಕರಾದ ಕೃಷ್ಣೇಗೌಡ, ದೇವರಾಜು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಬಿ. ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.


ತಾಲೂಕಿನ 9 ಪ್ರೌಢಶಾಲೆಗಳ 18 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಾರದಾನಿಕೇತನ ಶಾಲೆಯ ರೂಪಿಕಾ ಪ್ರಥಮ, ಚನ್ನರಾಯಪಟ್ಟಣದ ಜ್ಞಾನಸಾಗರ ಶಾಲೆಯ ಮೌಲ್ಯಾ ದ್ವಿತೀಯ ಮತ್ತು ಹಿರೀಸಾವೆಯ ಜಿಜಿಎಸ್‌ಎಸ್ ಶಾಲೆಯ ನಮ್ರತಾ, ಬೆಳಗಿಹಳ್ಳಿ ಶಾಲೆಯ ಭಾಸ್ಕರ್ ತೃತೀಯ ಸ್ಥಾನ ಗಳಿಸಿದರು. ಶ್ರೀನಿವಾಸಯ್ಯ ಪತ್ನಿ ಜಯಮ್ಮ, ಸಂಸ್ಥೆಯ ಕಾರ್ಯದರ್ಶಿ ಶ್ಯಾಮಲಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.


ಕಸಾಪ ಹೋಬಳಿ ಅಧ್ಯಕ್ಷ ಪ್ರಮೋದ್, ಪ್ರಮುಖರಾದ ಎಂಜಿನಿಯರ್ ನರೇಂದ್ರ, ವೆಂಕಟೇಶ್, ಶಿಕ್ಷಕ ಧರ್ಮರಾಜ್, ತಮ್ಮಣ್ಣ, ಬೋರೇಗೌಡ, ರಾಮೇಗೌಡ, ಇಸಿಒ ನಿತ್ಯಾನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net