ಕನ್ನಡ ಕಡ್ಡಾಯಕ್ಕೆ ಎಂಇಎಸ್ ವಿರೋಧ

25dvk 5
Published on

ಬೆಳಗಾವಿ: ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕನ್ನಡ ಕಡ್ಡಾಯಗೊಳಸಿರುವ ಕ್ರಮ ಖಂಡಿಸಿ ಎಂಇಎಸ್ ಮುಖಂಡರು ಕನ್ನಡ ಕಡ್ಡಾಯ ಆದೇಶ ಕೂಡಲೇ ವಾಪಸ್ ಪಡೆದು ಭಾಷಿಕ ಅಲ್ಪಸಂಖ್ಯಾತ ಆಯೋಗದ ಆದೇಶದ ಅನುಸಾರ ಮರಾಠಿ ಭಾಷೆಗೂ ಪ್ರಾತಿನಿಧ್ಯ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿರುವ ಎಂಇಎಸ್ ಮುಖಂಡರು, ಬೆಳಗಾವಿ ಮಹಾನಗರ ಪಾಲಿಕೆ ಸೇರಿ ಖಾನಾಪುರ, ನಿಪ್ಪಾಣಿ, ಅಥಣಿ ತಾಲೂಕಿನ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕನ್ನಡ ಕಡ್ಡಾಯಗೊಳಿಸಿ ಮರಾಠಿ ಕಡೆಗಣಿಸುತ್ತಿರುವ ಕ್ರಮ ಸರಿಯಲ್ಲ. ಈ ಭಾಗದಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದು, ಕನ್ನಡದ ಜತೆಗೆ ಮರಾಠಿ ಫಲಕಗಳು ಇರಬೇಕು. ದಾಖಲೆ ಪತ್ರಗಳನ್ನೂ ಮರಾಠಿಯಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಮರಾಠಿ ನಾಮಫಲಕಗಳನ್ನು ತೆರವುಗೊಳಿಸುತ್ತಿರುವ ಕಾರ್ಯ ನಡೆದಿದೆ. ಇದು ಖಂಡನೀಯ ಕ್ರಮ. 15 ದಿನದೊಳಗೆ ಭಾಷಿಕ ಅಲ್ಪಸಂಖ್ಯಾತ ಆಯೋಗದ ಆದೇಶ ಜಾರಿಗೊಳಿಸಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮಾಜಿ ಶಾಸಕ ಮನೋಹರ ಕಿಣೇಕರ, ಅಮರ ಯಳ್ಳೂರಕರ, ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಳೆ, ಆರ್.ಎಂ. ಚೌಗುಲೆ, ವಿಲಾಸ ಘಾಡಿ, ವಿಕಾಸ ಕಲಘಟಗಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net