ಕನ್ನಡ ಉಳಿವಿನಲ್ಲಿ ನಮ್ಮ ಅಸ್ತಿತ್ವ

1106KLb01
Published on

ಕಲಬುರಗಿ: ನೆಲದ ಸಾಹಿತ್ಯದ ಸಾಹಿತ್ಯದ ಶ್ರೀಮಂತಿಕೆಗೆ ಭಾಷೆಯ ವೈವಿಧ್ಯತೆ ಮತ್ತು ಅದರ ಸೊಗಡು ಮುಖ್ಯ. ಜಿಲ್ಲೆಯ ಗಡಿ ಭಾಗದಲ್ಲಿ ಕನ್ನಡ ಉಳಿವಿಗೆ ಭಾಷಾಭಿಮಾನ ಬೆಳೆಸಬೇಕಾಗಿದೆ. ಮಾತೃ ಭಾಷೆಯ ಶಾಲೆಗಳನ್ನು ಉಳಿಸಬೇಕು, ಬೆಳೆಸಬೇಕು. ಕನ್ನಡ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುರ‍್ಣ ಸಭಾ ಭವನದಲ್ಲಿ ಬುಧವಾರ ರ‍್ಪಡಿಸಿದ್ದ ಕನ್ನಡೋತ್ಸವದಲ್ಲಿ ಸಾಹಿತಿ ಜಗನ್ನಾಥ ತರನಳ್ಳಿ ವಿರಚಿತ ವಿಜಯ ಕನ್ನಡ ಕೃತಿ ಜನರ‍್ಪಣೆ ಮಾಡಿ ಮಾತನಾಡಿ, ಸಾಹಿತ್ಯದ ಪರಿಭಾಷೆಯ ಮೂಲಕ ಅರಿವು ಮೂಡಿಸುವ ಕರ‍್ಯವಾಗಬೇಕು. ಕನ್ನಡ ಸಾಂಸತಿಕ, ಸಾಹಿತ್ಯ ಲೋಕಕ್ಕೆ ಕಸಾಪ ಕೊಡುಗೆ ಅನನ್ಯ ಎಂದರು.

ಜಿಪಂ ಮಾಜಿ ಅಧ್ಯಕ್ಷ ನಿತಿನ್​ ಗುತ್ತೇದಾರ್​ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ನಿಂದ ನಿರಂತರ ಕರ‍್ಯಕ್ರಮ ಆಯೋಜಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಸಾಂಸತಿಕ ವಾತಾವರಣ ಮೂಡಿದೆ. ನಾಡು ನುಡಿಯ ಸೇವೆಗೆ ಎಲ್ಲರ ಬೆಂಬಲ ಇರಬೇಕು. ವಿಜಯಕುಮಾರ ತೇಗಲತಿಪ್ಪಿ ಅವರ ಕರ‍್ಯವನ್ನು ಶ್ಲಾಘಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಿಶ್ವಲಿಪಿಗಳ ರಾಣಿ ಕನ್ನಡಕ್ಕೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ರ‍್ನಾಟಕದ ಏಕೀಕರಣದಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಉಳಿಸಿಕೊಳ್ಳಲು, ಒಂದೆಡೆಯಲ್ಲಿ ಸೇರಿ ನಿಲ್ಲಲು ಪರಿ ಪರಿಯಾಗಿ ಹೋರಾಡಿದ ಪರ‍್ವಜರು ಬಹು ದೊಡ್ಡ ಅಸ್ಮಿತೆ ನೀಡಿದ್ದಾರೆ. ನಮ್ಮ ಕನ್ನಡದ ಕಿರಣಲೀಲೆ ಎಲ್ಲೆಡೆಗೂ ಬೀರುವಂತೆ ಮಾಡುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮುಂದಿನ ದಿನಗಳಲ್ಲೂ ಇನ್ನೂ ರಚನಾತ್ಮಕ ಕರ‍್ಯಕ್ರಮಗಳ ಯೋಜನೆ ರೂಪಿಸಲಾಗಿದೆ ಎಂದರು.

ಮಾಜಿ ಸೈನಿಕರು, ರಕ್ತ ದಾನಿಗಳು, ಕೃಷಿ ಕ್ಷೇತ್ರದ ಸಾಧಕರು, ವಿವಿಧ ರಂಗಗಳ ಪ್ರಮುಖರನ್ನೂ ವಿಶೇಷವಾಗಿ ಸತ್ಕರಿಸಲಾಯಿತು.

ಚವದಾಪುರ ಹಿರೇಮಠದ ಶ್ರೀ ರಾಜಶೇಖರ ಶಿವಾಚರ‍್ಯರು ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ.ಜಗನ್ನಾಥ ತರನಳ್ಳಿ ಮಾತನಾಡಿದರು. ಉತ್ಸವ ಸಮಿತಿಯ ದೇವಿಂದ್ರ ದೇಸಾಯಿ ಕಲ್ಲೂರ, ಕಲ್ಯಾಣಕುಮಾರ ಶೀಲವಂತ, ರ‍್ಮರಾಜ ಜವಳಿ, ರವೀಂದ್ರಕುಮಾರ ಭಂಟನಳ್ಳಿ, ಡಾ.ರೆಹೆಮಾನ್​ ಪಟೇಲ್​, ಶರಣರಾಜ ಛಪ್ಪರಬಂದಿ, ರ‍್ಮಣ್ಣ ಎಚ್​.ದನ್ನಿ, ಶಿವರಾಜ ಅಂಡಗಿ, ರಾಜೇಂದ್ರ ಮಾಡಬೂಳ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಸಿದ್ಧಲಿಂಗ ಜಿ ಬಾಳಿ, ಎ.ಕೆ. ರಾಮೇಶ್ವರ, ಸಿ.ಎಸ್​. ಮಾಲಿಪಾಟೀಲ್​, ಶಾಂತಾ ಪಸ್ತಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net