ಕನ್ನಡ ಅಂಕವೀರರಿಗೆ ಸನ್ಮಾನ 18ರಂದು

gurubasappa SajjanShetty
Published on

ಕಲಬುರಗಿ: ಕಸಾಪ ತಾಲೂಕು ಘಟಕದಿಂದ ಎಸ್ಸೆಸ್ಸೆಲ್ಸಿ ಕನ್ನಡದ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಅಂಕ ವೀರ ಪ್ರಶಸ್ತಿ ಪ್ರದಾನ ಸಮಾರಂಭ ಮೇ ೧೮ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಹುಮನಾಬಾದ್ ರಸ್ತೆಯಲ್ಲಿನ ಬೇಲೂರು ಕ್ರಾಸ್ ಹತ್ತಿರದ ಶಕುಂತಲಾ ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ತಿಳಿಸಿದ್ದಾರೆ. ೨೦೨೩-೨೪ನೇ ಸಾಲಿನ ಫಲಿತಾಂಶದಲ್ಲಿ ಶೇ.೯೦ ಅಂಕ ಪಡೆದ ವಿದ್ಯಾರ್ಥಿಗಳು ಕಸಾಪ ತಾಲೂಕು ಗೌರವ ಕಾರ್ಯದರ್ಶಿ ವಿಶಾಲಾಕ್ಷಿ ಮಾಯಣ್ಣವರ (೯೯೬೪೮೦೮೮೮೮), ಡಾ.ಮನೋಜಕುಮಾರ ಬುರುಬುರೆ (೮೦೭೩೮೦೦೦೫೬) ಅವರನ್ನು ಸಂಪರ್ಕಿಸಿ, ಮೇ ೧೫ರೊಳಿಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net