ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಧರಣಿ ೧೩ರಂದು

Dattatreya kudaki
Published on

ಕಲಬುರಗಿ: ಕಲಬುರಗಿ: ರಾಜ್ಯದ ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಡಿ.೧೩ರಂದು ಬೆಳಗಾವಿಯ ಸುವರ್ಣ ಸೌಧ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ನವ ಕರ್ನಾಟಕ ಎಂ.ಆರ್.ಡಬ್ಲುö್ಯ, ವಿ.ಆರ್.ಡಬ್ಲುö್ಯ, ಯು.ಆರ್.ಡಬ್ಲುö್ಯ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಗೌರವಾಧ್ಯಕ್ಷ ದತ್ತಾತ್ರೇಯ ಕುಡಕಿ ತಿಳಿಸಿದರು.

ರಾಜ್ಯದಲ್ಲಿ ೫೫೫೦ ಗ್ರಾಮೀಣ ಪುನರ್ವಸತಿ, ೧೭೫ ವಿವಿಧೋz್ದÉÃಶ ಪುನರ್ವಸತಿ ಹಾಗೂ ೪೨೬ ನಗರ ಪುನರ್ವಸತಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಕಾಯಂ ಮಾಡಲು ಆಗದಿದ್ದರೆ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹಿಂದೆ ಸಿದ್ದರಾಮಯ್ಯ ಕನಿಷ್ಠ ವೇತನದ ಭರವಸೆ ನೀಡಿದ್ದು, ಇದೀಗ ಅವರದ್ದೆ ಸರ್ಕಾವಿದ್ದರೂ ಸ್ಪಂದಿಸಿಲ್ಲ. ಸೆ.೧೬ರಂದು ನಿಯೋಗ ಭೇಟಿ ಮಾಡಿದ್ದಾಗಲೂ ಭರವಸೆ ನೀಡಿದ್ದರೂ ಸಕಾರಾತ್ಮಕ ಬೆಳವಣಿಗೆ ಆಗಿಲ್ಲ. ಸರ್ಕಾರ ಪ್ರತಿವರ್ಷ ೧೧೨.೧೧ ಕೋಟಿ ರೂ. ಗೌರವಧನ ಪಾವತಿಸುತ್ತಿದೆ. ಕನಿಷ್ಠ ವೇತನ ನೀಡಿದರೆ ೩೭ ಕೋಟಿ ರೂ. ಮಾತ್ರ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಶೀಘ್ರ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ಹೊಸ ತಾಲೂಕು ವ್ಯಾಪ್ತಿಯಲ್ಲಿ ಎಂ.ಆರ್.ಡಬ್ಲುö್ಯ ಕಾರ್ಯಕರ್ತರನ್ನು ನೇಮಿಸಬೇಕು. ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯಲ್ಲಿ ವಾರ್ಡ್ಗೆ ಒಬ್ಬರಂತೆ ಯು.ಆರ್.ಡಬ್ಲುö್ಯ ಕಾರ್ಯಕರ್ತರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಸೂಕ್ತ ಸ್ಪಂದನೆ ದೊರೆಯದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಉಪಾಧ್ಯP್ಷÀ ವೆಂಕಟಪ್ಪ ಚವ್ಹಾಣ್, ಮಾಧ್ಯಮ ಕಾರ್ಯದರ್ಶಿ ಮಹೇಶ ಕುಲ್ಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net