

ಕೊಡೇಕಲ್ : ಪ್ರಸ್ತುತ ಬ್ಯಾಂಕ್, ಸಹಕಾರ ಸಂಘಗಳ ಅಗತ್ಯ ಸಾಕಷ್ಟಿದೆ. ನಮ್ಮ-ನಿಮ್ಮೆಲ್ಲರ ಕನಸು ಸಾಕಾರಗೊಳಿಸುವಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ ಎಂದು ತಾಳಿಕೋಟೆ ಶ್ರೀ ಖಾಸ್ಗತೇಶ್ವರ ವಿರಕ್ತಮಠದ ಶ್ರೀ ಸಿದ್ಧö್ದಲಿಂಗ ದೇವರು ನುಡಿದರು.
ಶ್ರೀ ಬಸವೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬ ಮಹೋತ್ಸವದಲ್ಲಿ ನೇತೃತ್ವ ವಹಿಸಿದ್ದ ಅವರು, ಬಸವಣ್ಣನವರ ತತ್ವಾದರ್ಶಗಳಂತೆ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ. ಸಾಲ ತೀರಿಸುವ ಮನಸ್ಸಿನಿಂದ ಸಾಲ ಮಾಡಬೇಕೇ ವಿನಃ ನಾವೇ ತೀರಿ ಹೋಗಿರಬಾರದು. ನಿರ್ದಿಷ್ಟ ಚೌಕಟ್ಟಿನಲ್ಲಿ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕ ರವೀಂದ್ರ ಕಲಬುರಗಿ ಮಾತನಾಡಿ, ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಪಡೆದ ಸಾಲದ ಸಕಾಲಕ್ಕೆ ಮರುಪಾವತಿ ಮಾಡಬೇಕು. ಸಹಕಾರ ಕ್ಷೇತ್ರಕ್ಕೆ ಷೇರುದಾರರೇ ಮಾಲೀಕರಿದ್ದಂತೆ. ಅವರ ಸಹಕಾರದಿಂದಲೇ ಕೊಡೇಕಲ್‌ನ ಈ ಪತ್ತಿನ ಸಂಘ ಬೆಳ್ಳಿ ಹಬ್ಬ ಆಚರಿಸಿಕೊಳ್ಳುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸುರಪುರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಗೋವಿಂದಪ್ಪ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಸಂಘದ ಅಧ್ಯಕ್ಷ ಡಾ.ಜಿ.ಎಸ್.ಪಂಜಗಲ್ ಅಧ್ಯಕ್ಷತೆ ವಹಿಸಿದ್ದರು.
ಶಾಮಸುಂದರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಕೆಂಡದ ವಾರ್ಷಿಕ ವರದಿ ಓದಿದರು.
ಉಪಾಧ್ಯಕ್ಷ ಮಲ್ಲನಗೌಡ ಜೇವರ್ಗಿ, ಎಂ.ಬಿ. ಅಂಗಡಿ, ರವೀಂದ್ರ ಅಂಗಡಿ, ವೀರಸಂಗಪ್ಪ ಹಾವೇರಿ, ಸುನೀಲ ರಾಜಪುರ, ನಿರ್ದೇಶಕರಾದ ಸಂಗಪ್ಪ ಶಿವಪುರ, ಡಾ.ಬಸನಗೌಡ ಬಿರಾದಾರ, ಸಿ.ಎಸ್. ಹಾವೇರಿ, ಮಲ್ಲಿಕಾರ್ಜುನಗೌಡ ಮುರಾಳ, ಬಸವರಾಜ ಹೊಸಪೂಜಾರಿ, ಪ್ರಭುದೇವ ನೀಲಗಾರ, ಸಂಗಪ್ಪ ಅಪ್ಪಾಗೋಳ, ಲಕ್ಷö್ಮಪ್ಪ, ಪದ್ಮಾವತಿ ಕೆ., ಸಂಗಮ್ಮ ಗೋನಟಲ್, ಬಸಮ್ಮ ಕೊಡೇಕಲ್ ಇತರರಿದ್ದರು. ಕೋರಿಸಂಗಯ್ಯ ಗಡ್ಡದ ಸ್ವಾಗತಿಸಿದರು. ಬಸವರಾಜ ಬಂಡಿ ವಂದಿಸಿದರು. ಬಸವರಾಜ ಹಾದಿಮನಿ ನಿರೂಪಣೆ ಮಾಡಿದರು.
ನಾಲತವಾಡದ ಭರತನಾಟ್ಯ ಕಲಾವಿದ ವೀರೇಶ ಬಂಗಾರಗುAಡ ಬಸವಣ್ಣನವರ ವಚನಕ್ಕೆ ನಾಟ್ಯ ಮಾಡುವ ಮೂಲಕ ಪ್ರಾರ್ಥನೆ ನಡೆಸಿಕೊಟ್ಟರು. ವೀರಪಯ್ಯ ಹುಣಸಿಗಿಡದ, ಆಮಯ್ಯ ಮಠ, ಬಸವರಾಜ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಷೇರುದಾರರಿಗೆ ನೀಡುವ ಬೆಳ್ಳಿಯ ಬಸವೇಶ್ವರ ಮೂರ್ತಿ ಮತ್ತು ನೆನಪಿನ ಕಾಣಿಕೆಗಳನ್ನು ಪೂಜ್ಯರು ಬಿಡುಗಡೆಗೊಳಿಸಿದರು. ವಿವಿಧ ಕೇತ್ರಗಳ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.