

ಕನಕಪುರ: ಇನ್ನು ಮುಂದೆ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘ, ಸಂಸ್ಥೆಗಳು ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲು ನಗರಸಭೆ ಅನುಮತಿ ಪಡೆಯುವುದು ಕಡ್ಡಾಯ ಎಂದು ನಗರಸಭಾಧ್ಯಕ್ಷ ಕೆ.ಎನ್. ವೆಂಕಟೇಶ್ ತಿಳಿಸಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸ್ಥಳೀಯ ಸಂಘ ಸಂಸ್ಥೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಅಥವಾ ಯಾವುದೇ ಪ್ರಭಾವಿ ವ್ಯಕ್ತಿಗಳೇ ಇರಲಿ ಸಾರ್ವಜನಿಕ ಸ್ಥಳಗಳಲ್ಲಿ ್ಲೆಕ್ಸ್, ಬ್ಯಾನರ್ಸ್ ಅಳವಡಿಸುವ ಮುನ್ನ ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿ ಅನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ದಂಡ ಅಥವಾ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳೀಯ ಸಂಸ್ಥೆಗಳ ಮುಖಂಡರು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಹಲವು ಕಡೆ ಜಾಹೀರಾತುಗಳು ಸೇರಿ ಅಂಗಡಿಗಳ ನಾಮಫಲಕಗಳನ್ನು ಆಂಗ್ಲ ಭಾಷೆಯಲ್ಲಿ ಬರೆಸಲಾಗಿದೆ. ಎಲ್ಲ ನಾಮಫಲಕಗಳ ತಲೆಬರಹಗಳು ಮತ್ತು ವಿಳಾಸ ಕನ್ನಡದಲ್ಲೇ ಇರಬೇಕು. ತಪ್ಪಿದಲ್ಲಿ ಅಂತಹವರ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಲಹೆ ನೀಡಿದರು.
ಪೌರಾಯುಕ್ತೆ ಬಿ. ಶುಭಾ ಮಾತನಾಡಿ, ನಗರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಬೇಕು. ಸೂಚನೆ ಹಾಗೂ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಸರ ಇಂಜಿನಿಯರ್ ಪಾರ್ವತಿ ಮಾತನಾಡಿ, ್ಲೆಕ್ಸ್, ಬ್ಯಾನರ್ ಅಳವಡಿಸುವ ಬಗ್ಗೆ ಕಾನೂನಿರುವುದು ಹೊಸದೇನಲ್ಲ. ಎಲ್ಲ ಸಂಘ, ಸಂಸ್ಥೆ, ರಾಜಕೀಯ ಪಕ್ಷಗಳಿಗೆ ನಿಯಮ ಅನ್ವಯವಾಗುತ್ತದೆ ಎಂದರು.
ತಾಲೂಕಿನ ವಿವಿಧ ಕನ್ನಡ ಮತ್ತ ಇತರ ಸಂಘಟನೆಗಳ ಮುಖಂಡರಾದ ಕಬ್ಬಾಳೇಗೌಡ, ಭಾಸ್ಕರ್, ಜೋಗಮಾನ ಹೊಸಹಳ್ಳಿ ಶಿವಲಿಂಗಯ್ಯ, ಶಿವಕುಮಾರ್, ಬಿಜೆಪಿ ಮುಖಂಡ ವೆಂಕಟೇಶ್(ವೆಂಕಿ) ಮುಂತಾದವರು ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
ನಗರಸಭೆ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್, ಕಿರಿಯ ಅಧಿಕಾರಿ ಕುಸುಮ, ಅರುಣಾದೇವಿ ಇತರರಿದ್ದರು.