ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ: ವಿ.ಎಲ್ ಅಮರ್

ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ: ವಿ.ಎಲ್ ಅಮರ್
Published on

ಹೊಳೆನರಸೀಪುರ : ಸಾಹಿತ್ಯ ಕ್ಷೇತ್ರದಲ್ಲಿ ಅಜಾರಮರವಾಗಿರುವ ದಾಸಶ್ರೇ ರಲ್ಲಿ ಒಬ್ಬರು ಕನಕದಾಸರು  ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಎಲ್ ಅಮರ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ 535ನೇ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಸಮಾಜದಲ್ಲಿನ ಅಂಕುಡೊಂಕು ಜಾತಿಯತೆ ಅಸಮಾನತೆಯನ್ನು ತೊಡೆದು ಹಾಕಲು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದವರು ಭಕ್ತ ಶ್ರೇಷ್ಠ ಕನಕದಾಸರು ಎಂದರು.

ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿವೆ. ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಕನಕದಾಸರು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

15 ಮತ್ತು 16ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಢ್ಯತೆ ಮತ್ತು ಬೇಧ ಭಾವವನ್ನು ಹೋಗಲಾಡಿಸಿ ಸಾಮಾಜಿಕ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ರಚಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ದಾಸ ಶ್ರೇಷ್ಠರಲ್ಲಿ ಅಗ್ರಗಣ್ಯರಾದರು. ಕನಕರು ಮನುಕುಲದ ಉದ್ಧಾರಕ್ಕಾಗಿ ನೀಡಿದ ಕೊಡುಗೆ ಅಪಾರ ಅವರ ಆದರ್ಶಗಳು ಮನುಕುಲಕ್ಕೆ ದಾರಿದೀಪವಾಗಿವೆ. ಕುಲ ಕುಲವೆಂದು ಹೊಡೆದಾಡಿದಿರಿ ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ ಎಂದು ಹೇಳುವುದರ ಮೂಲಕ ಜನರನ್ನು ಎಚ್ಚರಿಸಿದರು ಎಂದು ಬಣ್ಣಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾಕ್ಟರ್ ಕೆ ಜಿ ಪರಶುರಾಮ್ ಅವರು ಮಾತನಾಡಿ ನಿಜವಾದ ಸಾಮಾಜಿಕ ನ್ಯಾಯ ಸಿಗುವ ಸ್ಥಳದಲ್ಲಿ ಭಕ್ತ ಕನಕದಾಸರ ಜಯಂತೋತ್ಸವ ವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆಯಾಗಿದೆ . ಕನಕದಾಸರ ಸಾಮಾಜಿಕ ನ್ಯಾಯದ ಬಗ್ಗೆ ಚಿಂತನೆ ಮಾಡುವಂತಹ ಚಿಂತಕರೆಂದರೆ ವಕೀಲರು ಬುದ್ದಿಜೀವಿಗಳು ಸಾಹಿತಿಗಳು ಸಾಮಾಜಿಕ ಹೋರಾಟಗಾರರು ಇವರೆಲ್ಲರೂ ನಿಜವಾಗಿಯೂ ಉತ್ತಮ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿದರು.

ಕನಕದಾಸರಿಗೆ 535 ವರ್ಷವಾದರೂ ಸಹ ಅವರು ಮತ್ತೊಮ್ಮೆ ದೇಶದ ಜನತೆಗೆ ನೆನಪಿಗೆ ಬರುತ್ತಿದ್ದಾರೆ ಅವರ ಕೀರ್ತನೆಗಳು ಎಲ್ಲರಿಗೂ ಆದರ್ಶ ಪ್ರಿಯವಾಗಿವೆ ಇವರ ಚಿಂತನೆ ಭಕ್ತಿ ಆದರ್ಶ ತತ್ವಗಳು ಇಂದಿಗೂ ಸಹ ಚಿರಸ್ಮರಣೀಯವಾಗಿವೆ ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಹಳ್ಳಿ ಕನಕದಾಸರು ಶ್ರೇಷ್ಠರಾಗಿದ್ದಾರೆ. ಇವರ ಕೀರ್ತನಗಳು ಸಮಾಜಕ್ಕೆ ಮಾದರಿಯಾಗಿದೆ. ಕನಕಾರು ಮನುಕುಲದ ಉದ್ಧಾರಕ್ಕಾಗಿ ನೀಡಿದ ಕೊಡುಗೆ ಅಪಾರ ಅವರ ಆದರ್ಶಗಳು ಮನುಕುಲಕ್ಕೆ ದಾರಿದೀಪವಾಗಿವೆ 15 ಮತ್ತು 16ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಪಿಡುಗುಗಳ ಕುರಿತು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ರಚಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ದಾಸ ಶ್ರೇಷ್ಠರಲ್ಲಿ ಅಗ್ರಗಣ್ಯರಾದರು ಎಂದರು.

 ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರವೀಣ್ ಆರ್ ಜೆ ಎಸ್ ,ಅಪರ ಸಿವಿಲ್ ನ್ಯಾಯಾಧೀಶ ಎಸ್ ಸಿದ್ದರಾಮ ಮಾತನಾಡಿದರು .

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್ ಎನ್ ಶ್ರೀನಿವಾಸ್ ಉಪಾಧ್ಯಕ್ಷೇ ಮಮತ ಕಾರ್ಯದರ್ಶಿ ಬಿ ಎಂ ಚಂದ್ರಶೇಖರ ಜಂಟಿ ಕಾರ್ಯದರ್ಶಿ ಸಿಎಂ ಅಶೋಕ್ ಖಜಾಂಚಿ ಹೆಚ್ಎ ಪೂರ್ಣಿಮಾ ಮಾಜಿ ಅಧ್ಯಕ್ಷ ಶಿವಮೂರ್ತಿ ಆರ್ ಡಿ ರವೀಶ್ ರಾಮಪ್ರಸನ್ನ ಭಾಷಂ ಮತ್ತಿತರರಿದ್ದರು.

ಹಿರಿಯ ಸಿವಿ ನ್ಯಾಯಾಧೀಶರಾದ ವಿ ಎಲ್ ಅಮರವರು ವಕೀಲರ ಸಂಘದ ಸಭಾಂಗಣದಲ್ಲಿ ಕನಕದಾಸರ ಭಾವಚಿತ್ರವನ್ನು ಅನಾವರಣಗೊಳಿಸಿದರು.ಬಳಿಕ ಸಂಘದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 25ಕ್ಕೂ ಹೆಚ್ಚು ವಕೀಲರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿ ಪುಣ್ಯ ಕಟ್ಟಿಕೊಂಡರು. ನ್ಯಾಯಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net