ಕನಕದಾಸರ ಆದರ್ಶ ಎಂದಿಗೂ ಪ್ರಸ್ತುತ

11Kush01
Published on

ಕುಶಾಲನಗರ: ಕನಕದಾಸರ ಆದರ್ಶಗಳು ಇಂದಿಗೂ ಎಂದಿಗೂ ಪ್ರಸ್ತುತವಾಗಿವೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಹಿಂದುಳಿದ ಮತ್ತು ಕೆಳ ಜಾತಿಯ ಜನರ ಶೋಷಣೆಯನ್ನು ವಿರೋಧಿಸಿದರು. ಅದಕ್ಕೆ ಪೂರಕವಾದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತನ್ನ ಜೀವನನ್ನೇ ಮುಡುಪಿಟ್ಟ ಮಹಾನ್ ಸಾಧಕ ಕನಕದಾಸರು. ಜನಾಂಗಗಳ ನಡುವೆ ಇದ್ದ ಅಂತರವನ್ನು ಹೋಗಲಾಡಿಸಿ, ಸಹಬಾಳ್ವೆಯ ಜೀವನದ ಸಾರವನ್ನು ಸಾರಿ ಹೇಳಿದ್ದರು. ಆಗಿನ ಕಾಲದಲ್ಲೇ ತುಳಿತಕ್ಕೆ ಒಳಗಾದ ಜನಾಂಗವನ್ನು ಮೇಲೆತ್ತಲು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಪ್ರತಿಪಾದನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಸ್ಮರಿಸಿದರು.


ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಉಪನ್ಯಾಸಕ ಮೇ.ನಾ.ವೆಂಕಟ್ ನಾಯಕ್ ಮಾತನಾಡಿ, 12ನೇ ಶತ ಮಾನದಲ್ಲಿ ಬಸವೇಶ್ವರರು ಸಮಾನತೆಯನ್ನು ಸಾರಿ ದ್ದನ್ನು ಕನಕದಾಸರು ಮುಂದುವರಿಸಿಕೊಂಡು ಬಂದರು. ಸಮಾಜದಲ್ಲಿ ಇರುವ ಶೋಷಣೆಯ ಬಗ್ಗೆ ಗಟ್ಟಿ ದ್ವನಿ ಎತ್ತಿದರು. ಅಂದಿನ ಕಾಲದಲ್ಲೇ ವಿವಿ ಧತೆಯಲ್ಲಿ ಏಕತೆ ಯನ್ನು ಕಾಣುವ ದೇಶ ನಮ್ಮದು ಎಂದು ಇಡೀ ವಿಶ್ವಕ್ಕೆ ಸಾರಿದರು ಎಂದರು.


ಕನಕದಾಸರು ತೋರಿಸಿ ಕೊಟ್ಟಿರುವ ದಾರಿಯಲ್ಲಿ ನಾವುಗಳು ನಡೆದು, ನುಡಿದಂತೆ ನಡೆಯುವುದನ್ನು ಅನುಸರಿಸಿದರೆ ನಾವು ಅವರಿಗೆ ನೀಡುವ ಗೌರವ. ಕನಕದಾಸರನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸದೆ ಪ್ರತಿಯೊಬ್ಬರಿಗೂ ಅವರ ಮಹತ್ವವನ್ನು ತಿಳಿಸಲು ಸರ್ಕಾರ ಕಾರ್ಯಯೋಜನೆ ಮಾಡಬೇಕೆಂದು ಸಲಹೆ ನೀಡಿದರು. ಇದೇ ದಿನ ಚಿತ್ರದುರ್ಗದ ವೀರ ವನಿತೆ ಒನಕೆ ಒಬ್ಬವ್ವ ಅವರ ಜನ್ಮ ದಿನ. ಆ ಸುದಿನವನ್ನು ಸರ್ಕಾರ ಸಾರ್ವಜನಿಕವಾಗಿ ಆಚರಿಸುವಂತೆ ಆಗಬೇಕು ಎಂದು ಮನವಿ ಮಾಡಿದರು. ಕುಶಾಲನಗರ ಪಪಂ ಅಧ್ಯಕ್ಷ ಬಿ.ಜಯವರ್ಧನ ಮಾತ ನಾಡಿದರು.

ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ, ಕುಶಾಲನಗರ ತಹಸೀಲ್ದಾರ್ ಟಿ.ಎಂ.ಪ್ರಕಾಶ್, ಸೋಮವಾರ ಪೇಟೆ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಬಿಇಒ ಕೆ.ವಿ.ಸುರೇಶ್, ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಪ್ರಭಾಕರ್, ಕುರುಬ ಸಮಾಜದ ಹೇಮಲತಾ, ಕನ್ನಡ ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ವಾರ್ತಾಧಿಕಾರಿ ಚಿನ್ನಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net