ಕನಕ ಜಯಂತಿಯಂದು ಸಾಧಕರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ

oplus_0
oplus_0
Published on

ಚಿತ್ರದುರ್ಗ: ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘ ಹಾಗೂ ಸಮಾಜದ ಇತರೆ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನ.18 ರಂದು ನಗರದಲ್ಲಿ ಆಯೋಜಿಸಿರುವ ಕನಕದಾಸರ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕನಕಶ್ರೀ ಪ್ರಶಸ್ತಿ ಹಾಗೂ ಸಮಾಜದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಬಿ. ಟಿ.ಜಗದೀಶ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9.30 ಕ್ಕೆ ನಗರದ ಕನಕ ವೃತ್ತದ ಬಳಿ ಶ್ರೀ ಈಶ್ವರಾನಂದಪುರಿ ಸ್ವಾ ಮೀಜಿ ಅವರು ಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ, ವಿವಿಧ ಕಲಾತಂಡಗಳಿರುವ ಮೆರವಣಿಗೆ ತರಾಸು ರಂಗಮಂದಿರ ತಲುಪಲಿದೆ.

ಅಲ್ಲಿ ವೇದಿಕೆ ಕಾರ‌್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸುವರು. ಕೊಪ್ಪಳ ವಿವಿ ಉಪ ಕುಲಪತಿ ಡಾ.ಬಿ.ಕೆ.ರವಿ ಉಪನ್ಯಾಸ ನೀಡುವರು. ಸಂಸದರು, ಶಾಸಕರು ಮತ್ತಿತರ ಗಣ್ಯರು ಉಪಸ್ಥಿತರಿರುವರು. ವೀರಶೈವ ಸಮಾಜದ ಮುಖಂಡ ಷಣ್ಮುಖಪ್ಪ, ಡಾ.ಇ.ಸತೀಶ್, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಪಿಡಿ ರೂಪಕುಮಾರಿ, ಕುಡಾ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಅವರಿಗೆ ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಭರಮಸಾಗರ ಪಿಎಸ್‌ಐ ಸುರೇಶ್, ಸಾಹಿತಿ ಸುಭಾಷ್‌ಚಂದ್ರ, ಡಾ.ರಶ್ಮಿಮಲ್ಲಪ್ಪ, ಎಂ. ವಿ.ಮಾಲತೇಶ್ ಹಾಗೂ ಜಗನ್ನಾಥ್ ಅವರನ್ನು ಸನ್ಮಾನಿಸಲಾಗುವುದು.

ಅಂದು ಸಂಜೆ 6.30ಕ್ಕೆ ಕನಕ ವೃತ್ತದಲ್ಲಿ ಕಂಬದ ರಂಗಯ್ಯ ತಂಡದಿಂದ ಏರ್ಪಡಿಸಿರುವ ಸಂಗೀತ ಕಾರ‌್ಯಕ್ರಮದಲ್ಲಿ ಮಾಲತೇಶ್ ಅರ ಸ್, ಯೋಗೀಶ್ ಸಹಾದ್ರಿ, ಮಲ್ಲಿಕಾರ್ಜನಯ್ಯ, ಪರಶುರಾಮ್, ಕ್ಯಾದಿಗೆರೆ ರೇಣುಕಾರಾಜ್ ಅವರನ್ನು ಸನ್ಮಾನಿಸಲಾಗುವುದು. ಕನಕದಾಸರ ಜಯಂತ್ಯುತ್ಸವವನ್ನು ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಮಟ್ಟದಿಂದ ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲೂ ಆಯೋಜಿಸಲಾಗುವುದು. ಜಿಲ್ಲೆಯಲ್ಲಿ ಸಮುದಾಯದ ಜನಗಣತಿಗೂ ಯೋಜಿಸಲಾಗಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಓಂಕಾರ್, ಪ್ರೇಮ್, ಲೋಕೇಶ್, ರಾಜು, ಮಹಾಲಿಂಗಪ್ಪ, ನಾರಾಯಣ ಗೌಡ, ಉಮೇಶ್, ಮಾಳೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net