

ಚಿತ್ರದುರ್ಗ: ಜಿಲ್ಲಾ ಮಟ್ಟದ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಅದ್ದೂರಿಯಿಂದ ಆಚರಿಸಬೇಕಿದೆ ಎಂದು ಚಿತ್ರದು ರ್ಗ ತಾಲೂಕು ಕುರುಬರ ಸಂಘದ ಅಧ್ಯಕ್ಷ ಓಂಕಾರಪ್ಪ ಹೇಳಿದರು.
ನಗರದ ಕನಕಗುರುಪೀಠ ಶಾಖಾಮಠದಲ್ಲಿ ಮಂಗಳವಾರ ತಾಲೂಕು ಕುರುಬರ ಸಂಘ ಏರ್ಪಡಿಸಿದ್ದ ಕನಕ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಭಾವಂತರು, ಸಾಧಕರನ್ನು ಗೌರವಿಸುವುದು, ಇತಿಹಾಸದ ಮಹತ್ವದ ಸಾರುವ ಮಹತ್ವದ ಕಾರ್ಯಕ್ರಮ ಇದಾಗಬೇಕಿದೆ ಎಂದರು.
ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಎಲ್ಲ ಸಮಾಜದಲ್ಲಿಯೂ ಸಮಸ್ಯೆ ಸಹಜ, ಅದರಂತೆ ಕುರುಬರ ಸಮಾಜ, ಸಂಘಟನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸೋಣ ಎಂದರು.
ತಾಲೂಕು ಕುರುಬರ ಸಂಘದ ಕಾರ‌್ಯದರ್ಶಿ ಯೋಗೀಶ್ ಸಹ್ಯಾದ್ರಿ ಮಾತನಾಡಿದರು.
ವಕೀಲ ಹೇಮಕೃಷ್ಣ, ಲೋಕೇಶಪ್ಪ, ಗುರುಸ್ವಾಮಿ, ನಿಶಾನಿ ಶಂಕರ್, ಮಾಲತೇಶ್‌ಅರಸ್ ಮಾತನಾಡಿದರು. ಸಜ್ಜನಕೆರೆ ರಾಜಣ್ಣ, ಡಿ.ಉಮೇಶ್, ಪ್ರೇಮ್‌ಕುಮಾರ್, ಲೋಕೇಶ್, ಎಸ್.ಬಿ.ಎಲ್.ನಾಗರಾಜ್, ಸಂತೋಷ್, ಲಕ್ಷ್ಮಣ್, ಕೆಂಚಪ್ಪ ನೆರೆನಾಳ್, ಸುರೇಶ್ ಇತರರು ಇದ್ದರು.