

ಚಿತ್ರದುರ್ಗ: ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮವನ್ನು ಸ್ವಾಗತಿಸಿದರೂ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ತಲೆ ಯೆತ್ತಿದೆ. ಮೊದಲು ನಾವು ಎಲ್ಲ ವಿಷಯ ಅವಲೋಕಿಸಿ ಯುದ್ಧ ಆರಂಭಿಸಿದ ಮೇಲೆ ಪಾಠ ಕಲಿಸುವುದು ನಮ್ಮ ಗುರಿಯಾಗ ಬೇಕಿತ್ತು. ಆದರೆ, ಪಾಕ್‌ಗೆ ನಾವು ನಿಜವಾಗಿಯೂ ಪಾಠ ಕಲಿಸಿದ್ದೀವೆಯೇ? ತಕ್ಕ ಪಾಠ ಕಲಿಸಿದ್ದೇವೆಂಬ ಪರಸ್ಪರ ಹೇಳಿಕೆ ಎರಡೂ ದೇಶಗಳಿಂದ ಬಂದಿದೆ.
ಆಂತರಿಕ ವಿಚಾರದಲ್ಲಿ ಬೆರಳು ತೋರಿಸದಂತೆ ಪಾಕ್‌ಗೆ ಪಾಠ ಕಲಿಸಬೇಕಿತ್ತು. 1971ರಲ್ಲೂ ತೊಂದರೆ ನೀಡಿದ್ದ ಪಾಕಿಸ್ತಾನವನ್ನು ಇಂದಿ ರಾಗಾಂಧಿ ಇಬ್ಭಾಗ ಮಾಡಿದ್ದರು. ಯುದ್ಧಕ್ಕೆ ಹೋದ ಮೇಲೆ ತಾರ್ಕಿಕ ಅಂತ್ಯ ಸಿಗಬೇಕು. ಅದನ್ನೆಲ್ಲ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕು. ಅಮೆರಿಕ ಹೇಳಿದಾಕ್ಷಣ ನಿಲ್ಲಿಸಿದರೆ ಹೇಗೆ? ನಮ್ಮ ಉದ್ದೇಶ ಈಡೇರಿದೆಯೇ? ಇದು ಭಾರತದ ಎಲ್ಲ ನಾಗರಿಕರ ಮನಸ್ಸಿನಲ್ಲಿರುವ ಪ್ರಶ್ನೆ ಯಾಗಿದೆ ಎಂದರು.
ಇದಕ್ಕೆ ಕೇಂದ್ರ ಉತ್ತರಿಸಬೇಕು. ಕಾಶ್ಮೀರ ನಮ್ಮ ಆಂತರಿಕ ವಿಷಯವೆಂದು ಪಾಕಿಸ್ತಾನ ಹೇಳಿದ್ದು, ಇದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸು ವು ದು ಎಷ್ಟು ಸರಿ?ಹಾಗಾದ್ರೆ ಇಷ್ಟು ದಿನಗಳ ನಮ್ಮ ನಿಲುವು ಏನಾಯ್ತು?ಕಾಶ್ಮೀರ ಭಾರತದ ಆಂತರಿಕ ವಿಷಯವೊ?ಅಥವಾ ಅಂತಾರಾಷ್ಟ್ರೀಯ ವಿಷಯವೋ?ನಾವೇ ಇದನ್ನು ಅಂತಾರಾಷ್ಟ್ರೀಯ ಮಾಡುತ್ತಿದ್ದೇವೆಯೇ?
ಕಾಶ್ಮೀರದ ಕುರಿತು ಯಾರು ಬೇಕಾದರೂ ಉಪದೇಶ ಕೊಡಬಹುದು. ಆದರೆ ನಷ್ಟ ಆಗುವುದು ನಮಗೆ. ಪಾಕ್‌ಗೆ ಶಾಶ್ವತವಾಗಿ ಪಾ ಠ ಕಲಿಸಬೇಕೆಂಬ ಸಂಕಲ್ಪ ಈಡೇರಿದೆಯೇ ಎಂಬುದನ್ನು ಕೇಂದ್ರ ತಿಳಿಸಬೇಕು.
ಎರಡು ದೇಶಗಳು ಕದನ ವಿರಾಮವನ್ನು ಗೌರವಿಸುತ್ತಿವೆ. ನಾವು ಮತ್ತು ಪಾಕಿಸ್ತಾನದವರು ಮಾತನಾಡಿಕೊಳ್ಳುವುದು ಒಂದು ಭಾಗ ವಾದರೆ, ಬೇರೆ ದೇಶ ಮಧ್ಯಸ್ಥಿಕೆ ವಹಿಸುವುದು ಇನ್ನೊಂದು ಭಾಗ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದಾಕ್ಷಣ ಮಂಡಿ ಊರಿದರೆ ನಮ್ಮ ಸಾರ್ವಭೌಮತೆ ಏನಾಯಿತು ? ಟ್ರಂಪ್ ಏನು ಹೆಡ್‌ಮಾಸ್ಟರಾ?ನಾವು ಸ್ಕೂಲ್ ಮಕ್ಕಳಾ? ಅವರು ಹೇಳಿದರು ಎಂದ ಕೂಡಲೇ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಒಪ್ಪಿದ್ದರೆ ನಮ್ಮ ಸಹಮತವಿತ್ತು. ಇನ್ನೊಮ್ಮೆ ನಮ್ಮ ವಿಚಾರದಲ್ಲಿ ಕೈ ಹಾಕದ ರೀತಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದೀವಾ?ಅಮೆರಿಕ ಹೇಳಿದ ಕೂಡಲೇ ಜೀ ಹುಜೂರ್ ಎಂದಿದ್ದು ಸರಿಯೆ? ಎಂದು ಸಚಿವ ಕೃಷ್ಣಬೈರೇಗೌಡ ಕೇಂದ್ರದ ವಿರುದ್ಧ ಪ್ರಶ್ನೆಗಳ ಮಳೆಗರೆದರು.
----