ಕದನ ವಿರಾಮ ಘೋಷಿಸಲು ಟ್ರಂಪ್​ ಬೇಕೆ?

Priyank Kharge
Published on

ಕಲಬುರಗಿ: ಭಾರತ&ಪಾಕ್​ ಮಧ್ಯೆ ನಡೆಯುತ್ತಿರುವ ಕದನ ವಿರಾಮವನ್ನು ಟ್ವೀಟ್​ ಮೂಲಕ ಅಮೆರಿಕಾ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಘೋಷಿಸಿದ್ದು, ಏಕೆ? ಅತ್ಯಂತ ಕೆಳಮಟ್ಟದ ಪದಗಳನ್ನು ಬಳಸಿದ್ದು, ಸರಿಯಲ್ಲ. ಆದರೆ ಮೋದಿ, ವಿದೇಶಾಂಗ ಸಚಿವರು, ಅಜಿತ್​ ದೋವಲ್​ ಏನು ಮಾಡುತ್ತಿದ್ದಾರೆ? ಅವರೇಕೆ ಘೋಷಿಸಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಪ್ರಿಯಾಂಕ್​ ರ‍್ಖಗೆ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಕದನ ನಡೆದ ವೇಳೆಯೇ ಪಾಕಿಸ್ತಾನಕ್ಕೆ ವಿಶ್ವ ಹಣಕಾಸು ಸಂಸ್ಥೆ ಸಾಲ ನೀಡುತ್ತದೆ. ಅದನ್ನು ತಡೆಯುವಲ್ಲಿ ಮೋದಿ ವಿಲರಾಗಿದ್ದಾರೆ ಅಂತಲೇ ರ‍್ಥ. ಬೇರೆ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ, ಮಾತುಕತೆ ಮಾಡಿ ಸಂಬಂಧ ವೃದ್ಧಿಸಬೇಕು ಎಂದು ಹೇಳಿದರು.

ರ‍್ಕಿ, ಚೀನಾ ಪಾಕ್​ಗೆ ನೇರ ಬೆಂಬಲಿಸಿದವು. ಆದರೆ ಭಾರತಕ್ಕೆ ಒಂದೇ ಒಂದು ದೇಶ ಅಧಿಕೃತ ಬೆಂಬಲಿಸಲಿಲ್ಲ. ಇದರಲ್ಲಿಯೇ ವಿಶ್ವಗುರು ಮೋದಿ ಅವರ ವಿದೇಶಾಂಗ ನೀತಿ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಸೈನ್ಯ ಯಶಸ್ವಿಯಾಗಿ ಎಲ್ಲವನ್ನು ಎದುರಿಸಿದೆ. ಇಡೀ ದೇಶ, ಎಲ್ಲ ಪಕ್ಷ ಸೇನೆ ಮತ್ತು ರ‍್ಕಾರದ ಜತೆಗೆ ನಿಂತರೂ ಸಹ ಟ್ರಂಪ್​ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೋದಿ ರ‍್ವಪಕ್ಷ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಜನರಿಗೆ ಮಾತನಾಡಿ ತಿಳಿಸುತ್ತಿಲ್ಲ. ಬರೀ ಸೋಷಿಯಲ್​ ಮೀಡಿಯಾದಲ್ಲಿ ಯುದ್ಧ ನಡೆದಿದೆ. ನಾವು ಗೆಲ್ಲುವಂತ್ತಿದ್ದರೆ ಕದನ ವಿರಾಮ ಏಕೆ ಬೇಕು?. ಬರೀ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಸ್ಪಷ್ಟತೆ ನೀಡುತ್ತಿಲ್ಲ. ಮೋದಿ ಎಲ್ಲ ನಿರೀೆ ಹುಸಿ ಮಾಡಿದ್ದಾರೆ. ಅವರ ೫೬ ಇಂಚಿನ ಎದೆ ಎಲ್ಲಿಗೆ ಹೋಯಿತು?. ದೇಶಕ್ಕಿಂತ ಬಿಹಾರ ಚುನಾವಣೆ ಹೆಚ್ಚಾಗಿದೆ ಎಂದು ಕಿಡಿ ಕಾರಿದರು.

ಪಾಕಿಸ್ತಾನದವರು ಭಯೋತ್ಪಾದನೆ ಪುನ@ ಹೆಚ್ಚಿಸುತ್ತಾರೆ. ೧೫೦ ಕಿ.ಮೀ.ಗಡಿಯ ಒಳಗೆ ಬಂದು ಕೊಂದು ಹೋದ ಉಗ್ರರು ಎಲ್ಲಿಗೆ ಹೋದರು ತಿಳಿಸಲಿ. ಜಾಗಟೆ ಹೊಡೆಯಲು, ಮಕ್ಕಳಿಗೆ ಪರೀೆ ಹೇಳಲು, ಮನ್​ಕಿ ಬಾತ್​ ಮಾತಾಡಲು ಬರುತ್ತಾರೆ. ದೇಶದಲ್ಲಿ ವ್ಯಕ್ತಿಯ ವೈಭವೀಕರಣವಾಗುತ್ತಿದೆ. ವ್ಯಕ್ತಿ ಪೂಜೆ ಬಿಟ್ಟು ದೇಶದತ್ತ ಗಮನ ಹರಿಸಿದರೆ ಪ್ರಗತಿ ಸಾಧ್ಯ ಎಂದರು.

ಯುದ್ಧಕ್ಕೆ ವಿರಾಮ ಇದೆ. ಆದರೆ ಭಯೋತ್ಪಾದನೆಗೆ ವಿರಾಮ ಇಲ್ಲ. ಯುಪಿಎ ರ‍್ಕಾರ ಇದ್ದಾಗ ಪಾಕಿಸ್ತಾನವನ್ನು ಭಯೋತ್ಪಾದನಾ ದೇಶವೆಂದು ಘೋಷಿಸಲಾಗಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net