ಕದಂಬದಿಂದ ಬಾಳೆಕಾಯಿ ಖರೀದಿ

22sdp3
Published on

ಸಿದ್ದಾಪುರ: ತಾಲೂಕಿನ ಬಿದ್ರಕಾನ ಸೇವಾ ಸಹಕಾರಿ ಸಂಘದಲ್ಲಿ ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದಿಂದ ಬಾಳೆಕಾಯಿ, ಲವಂಗ, ಕಾಳಮೆಣಸು, ಗೇರಬೀಜ ಖರೀದಿ ಪ್ರತಿ ಬುಧವಾರ ನಡೆಯಲಿದೆ ಎಂದು ಕದಂಬ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ ಹೇಳಿದರು.

ಬಿದ್ರಕಾನ ಸೇವಾ ಸಹಕಾರಿ ಸಂಘದಲ್ಲಿ ಬಾಳೆಕಾಯಿ ಖರೀದಿ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಬಿದ್ರಕಾನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ಎಸ್. ಹೆಗಡೆ, ಎಪಿಎಂಸಿ ಅಧ್ಯಕ್ಷ ಕೆ.ಜಿ. ನಾಗರಾಜ, ನರೇಂದ್ರ ಹೆಗಡೆ ಹೊಂಡಗಾಸಿಗೆ, ಡಿ.ಜಿ. ಭಟ್ಟ ಮುತ್ತಿಗೆ, ಎಪಿಎಂಸಿ ಕಾರ್ಯದರ್ಶಿ ಮಂಗೇಶ ನಾಯ್ಕ, ಬಿದ್ರಕಾನ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಪ್ರಸನ್ನ ಹೆಗಡೆ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net