

ಮೈಸೂರು: ಕದಂಬ ರಂಗ ವೇದಿಕೆ ವತಿಯಿಂದ ‘ಕದಂಬ’ ರಾಜ್ಯಮಟ್ಟದ ಏಕವ್ಯಕ್ತಿ ಮಹಿಳಾ ನಾಟಕೋತ್ಸವವನ್ನು ಫೆ.2ರಿಂದ 3 ದಿನಗಳ ಕಾಲ ನಗರದ ಕಲಾಮಂದಿರದಲ್ಲಿರುವ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
2 ರಂದು ಸಂಜೆ 6.30ಕ್ಕೆ ಹಿರಿಯ ರಂಗ ನಟಿ ಸುಂದರಶ್ರೀ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮತ್ತೊಬ್ಬ ಹಿರಿಯ ರಂಗ ನಟಿ ರಾಮೇಶ್ವರಿವರ್ಮ ಹಾಗೂ ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಪಾಲ್ಗೊಳ್ಳುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಜಶೇಖರ ಕದಂಬ ತಿಳಿಸಿದರು.
2 ರಂದು ಸಾಣೇಹಳ್ಳಿ ಗ್ರಾಮ ರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಮಂಜುಳಾ ಬದಾಮಿ ಅಭಿನಯದ ವಸುಂಧರ ನಾಟಕ ಪ್ರದರ್ಶನವಾಗಲಿದೆ. 3ರಂದು ಬೆಂಗಳೂರಿನ ಸೆಂಟರ್ ಫಾರ್ ಡಿಸೈನ್ ಆರ್ಟ್ಸ್ ಸಂಸ್ಥೆ ವತಿಯಿಂದ ಡಾ.ಲೀಲಾ ಬಸವರಾಜ್ ಅಭಿನಯದ ಅವ್ವರಸಿ, 4ರಂದು ಬೆಂಗಳೂರಿನ ಕ್ಲೌನ್ಸ್ ತಂಡದ ವತಿಯಿಂದ ಅಪೂರ್ವ ನಾಗರಾಜ್ ಅಭಿನಯದ ರಂಗನಾಯಕಿ ನಾಟಕ ಪ್ರದರ್ಶನ ನಡೆಯಲಿದೆ. ನಿತ್ಯ ಸಂಜೆ 6.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.