

ಬಳ್ಳಾರಿ: ಕೃತಿಗಳ ಕಥೆಗಳಲ್ಲಿ ಓದುಗರ ಎದೆಗೆ ತಟ್ಟುವಂತ ಗಟ್ಟಿತನವಿರಬೇಕು. ಇಲ್ಲವಾದರೆ ಓದುಗನ ಮನ್ನಣೆ ಇಲ್ಲದೇ ಸೊರಗುತ್ತದೆ ಎಂದು ಮಕ್ಕಳ ವೈದ್ಯ ಡಾ. ವೈ. ಸಿ. ಯೋಗಾನಂದರೆಡ್ಡಿ ಹೇಳಿದರು.
ಇಲ್ಲಿನ ಕೊಟ್ಟೂರು ಸ್ವಾಮಿ ಶಿಕ್ಷಕರ ಸಭಾಂಗಣದಲ್ಲಿ ಅರಿವು ಸಂಸ್ಥೆಯಿಂದ ಭಾನುವಾರ ನಡೆದ ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ವೈದ್ಯ ಡಾ. ಗಡ್ಡಿ ದಿವಾಕರ ಅವರ ಮೌನ ಮಿಡಿದ ಮಾತು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಆಗ ಮಾತ್ರ ಆ ಕೃತಿಗಳು ಅಪಾರ ಓದುಗರ ಬಳಗ ಸೃಷ್ಟಿಸಿಕೊಳ್ಳುತ್ತದೆ. ಸಾಮಾಜಿಕ ಬದಲಾವಣೆ ಆಗಬೇಕಾದರೆ ವೈಚಾರಿಕತೆಯ ಪುಸ್ತಕಗಳು ಜನಮಾನಸಕ್ಕೆ ತಲುಪಬೇಕು. ಫೇಸ್‌ಬುಕ್, ವ್ಯಾಟ್ಸಪ್ ಮೂಲಕ ಬದಲಾವಣೆ ಖಂಡಿತ ಸಾಧ್ಯವಾಗುವುದಿಲ್ಲ. ಪುಸ್ತಕ ರೂಪದಲ್ಲಿ ಅಚ್ಚಾಗಿ ಹೊರ ಹೊಮ್ಮಿದಾಗ ಮಾತ್ರ ಕೃತಿಯ ಮೂಲ ಆಶಯ ಈಡೇರಲು ಸಾಧ್ಯ. ಬರಹಕ್ಕೆ ಗಟ್ಟಿತನ ಇರುತ್ತದೆ. ಇದನ್ನು ಗುರುತಿಸಬೇಕಾದವರು ಓದುಗರು. ವಿಮರ್ಶಾತ್ಮಕ ಸಮಾಜ ಬೆಳೆಯಬೇಕಾದರೆ ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಆಗ ಮಾತ್ರ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಅರಿವು ಸಂಸ್ಥೆಯ ಮುಖ್ಯಸ್ಥ ಸಿರಿಗೇರಿ ಪನ್ನರಾಜ್, ಲೇಖಕ ಡಾ.ಅರವಿಂದ ಪಾಟೀಲ್, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಸತೀಶ್ ಹಿರೇಮಠ ಇದ್ದರು.