ಕಥೆಗಳಿಗೆ ಪುರಾಣ ಸಾಹಿತ್ಯ ಮೂಲಾಧಾರ

Mythology is the foundation for stories.
ಹುನಗುಂದ ಪಟ್ಟಣದ ವಿಜಯ ಮಹಾಂತೇಶ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಿಂಗಳು ಬೆಳಕು-26 ಕಾರ್ಯಕ್ರಮದಲ್ಲಿ ಶಿವಶಂಕರ ಮುತ್ತಗಿ ಮಾತನಾಡಿದರು. ಎಸ್.ಎಸ್. ಮುಡಪಲದಿನ್ನಿ, ಎಸ್. ವಿ. ಚೌಡಾಪೂರ, ಎಸ್.ಎಚ್. ಹಳ್ಳೂರ ಇದ್ದರು.
Published on

ಹುನಗುಂದ: ಪ್ರಾಚೀನ ಸಾಹಿತ್ಯವನ್ನು ಮೂಲಾಧಾರವಾಗಿ ಬಳಿಸಿಕೊಂಡಾಗ ಕಥೆ, ಕಾವ್ಯಗಳು ಹೆಚ್ಚಿನ ಗಮನ ಸೆಳೆಯುತ್ತವೆ ಎಂದು ಬಾಗಲಕೋಟೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಶಂಕರ ಮುತ್ತಗಿ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ತಿಂಗಳು ಬೆಳಕು-26 ಕಾರ್ಯಕ್ರಮದಲ್ಲಿ ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಹವೇಲಿ ದೊರೆಸಾನಿ ಕಥಾಸಂಕಲನ ಅವಲೋಕಿಸಿ ಮಾತನಾಡಿದ ಅವರು, ಹವೇಲಿ ದೊರೆಸಾನಿ ಕಥಾಸಂಕಲನದ ಶೀರ್ಷಿಕೆಗಳ ಜತೆಗೆ ನಿರೂಪಣೆ ಅದ್ಭುತವಾಗಿ ಮೂಡಿಬಂದಿದೆ. ಕಥೆಯುದ್ದಕ್ಕೂ ಸಮಾಜಮುಖಿ ಚಿಂತನೆಯನ್ನೊಳಗೊಂಡಿದ್ದು, ಜನಸಾಮಾನ್ಯರು ಓದಿದ ತಕ್ಷಣ ಅರ್ಥೈಸಿಕೊಳ್ಳಬಹುದಾಗಿದೆ. ಪುರಾಣ ಸಾಹಿತ್ಯವು ಇಂದಿನ ಕಥೆಗಳಿಗೆ ಮೂಲಾಧಾರವಾಗಿದೆ ಎಂದರು.

ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ, ಕಥಾ ಪ್ರಕಾರಕ್ಕೆ 125 ವರ್ಷಗಳ ಇತಿಹಾಸವಿದೆ. ವಾಸ್ತವಿಕತೆಯೊಂದಿಗೆ ಕಲ್ಪನೆಗಳು ಕಥೆಗಾರನಿಗೆ ಬಹಳ ಮುಖ್ಯ. ಇಂದಿನ ಸಮಸ್ಯೆಗಳಿಗೆ ಕಥೆಗಳ ಮೂಲಕ ಹೊಸ ಸ್ವರೂಪ ಕೊಡಬಹುದು ಎಂದರು.

ಹೊನ್ನಕುಸುಮ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಸ್. ಮುಡಪಲದಿನ್ನಿ ಮಾತನಾಡಿ, ಕಥಾ ಸಂಕಲನವು ದುರಂತ ಅಂತ್ಯ ಹಾಗೂ ಸುಖಾಂತ್ಯದ ವೈವಿಧ್ಯಗಳನ್ನು ಒಳಗೊಂಡಿದೆ ಎಂದರು.

ಕಥಾ ಸಂಕಲನದ ಕುರಿತು ಎಸ್.ವಿ. ಚೌಡಾಪೂರ, ಎಸ್.ಎಚ್, ಹಳ್ಳೂರ, ಜಿ.ವಿ. ದೇಶಪಾಂಡೆ, ಗೀತಾ ತಾರಿವಾಳ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net