

ಕಲಬುರಗಿ: ಕನ್ನಡ ಕಥಾ ರಚನೆಯಲ್ಲಿ ತೊಡಗಿದ ಕಥೆಗಾರರು ರ‍್ತಮಾನದ ನೈಜ ಸಂಗತಿಗಳನ್ನು, ವಾಸ್ತವಿಕ ಅಂಶಗಳನ್ನು ವಸ್ತು ವಿಷಯಗಳನ್ನಾಗಿ ಮಾಡಿ ಕಥೆ ರಚಿಸಬೇಕು ಎಂದು ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಪ್ರಕಾಶನದ ಸಹಯೋಗದಲ್ಲಿ ನಗರದ ಕನ್ನಡ ಭವನದ ಸುರ‍್ಣ ಸಭಾ ಭವನದಲ್ಲಿ ಶನಿವಾರ ರ‍್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಪ್ರೊ.ಕೃಷ್ಣಾ ನಾಯಕ ಅವರ ಸಮಗ್ರ ಕಥಾ ಸಂಕಲನ "ಕ್ರೌಂಚ ಪ್ರಲಾಪ' ಕೃತಿ ಲೋಕರ‍್ಪಣೆ ಮಾಡಿ, ಮಾತನಾಡಿದರು.
ಪ್ರೊ.ಕೃಷ್ಣ ನಾಯಕ ರ‍್ತಮಾನದ ವಿಷಯಗಳ ಕುರಿತು ಅತ್ಯುತ್ತಮ ಕಥೆಗಳನ್ನು ರಚಿಸಿದ ಅಪರೂಪದ ಕಥೆಗಾರ. ಕ್ರೌಂಚ ಪಕ್ಷಿ ಪ್ರೀತಿ, ಪ್ರೇಮ ಮತ್ತು ಕೂಡುವಿಕೆಗೆ ಸಂಕೇತವಾಗಿದೆ. ಸಮಾಜದಲ್ಲಿ ಬಾಳುವ ನಾವು ಕೂಡಿ ಬದುಕುವ ಕಲೆ ತಿಳಿಯಬೇಕು. ಬಹುಮುಖ್ಯವಾಗಿ ಬಂಜಾರ ಸಮುದಾಯದ ಆಚರಣೆ, ನಂಬಿಕೆ, ಬದುಕಿನ ಮೂಢನಂಬಿಕೆಗಳ ಕುರಿತು ವಸ್ತು ವಿನ್ಯಾಸ ಮಾಡಿಕೊಂಡು ಕಲಾತ್ಮಕವಾಗಿ ಉತ್ತಮ ಕಥೆಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಕೃತಿ ಲೇಖಕ ಪ್ರೊ.ಕೃಷ್ಣ ನಾಯಕ ಮಾತನಾಡಿ, ಕ್ರೌಂಚ ಪ್ರಲಾಪ ಕೃತಿ ಒಟ್ಟು ಐದು ಕಥಾ ಸಂಕಲನ ಒಳಗೊಂಡ ಕೃತಿಆಗಿದೆ. ೩೯ ಕಥೆಗಳಿದ್ದು, ಬಹುಪಾಲು ಕಥೆಗಳು ನಮ್ಮ ಸಮುದಾಯದ ಸಂಸತಿ, ಪರಂಪರೆ, ಆಚರಣೆ, ಮಾನವೀಯ ಸಂಬಂಧಗಳ ವೈಶಿಷ್ಟ$್ಯತೆ ಮೇಲೆ ಬೆಳಕು ಚೆಲ್ಲುತ್ತ, ಸಮಾಜದ ಅನೇಕ ಘಟನೆಗಳು, ಸಂಗತಿಗಳು ಕಥೆಗೆ ವಸ್ತುಗಳಾಗಿವೆ. ಅಲ್ಲದೆ ಬಂಜಾರ ಸಮುದಾಯದ ಜನರ ಮೂಢನಂಬಿಕೆ, ಅಂಧಾನುಚರಣೆಯ ಸಂಗತಿಗಳನ್ನು ವಿಡಂಬನಾತ್ಮಕ, ವ್ಯಂಗ್ಯವಾಗಿ ಕಥೆಗಳಲ್ಲಿ ಚಿತ್ರಿಸಿದ್ದೇನೆ. ಆಚರಣೆಗಳ ರ‍್ಥ ಜನರಿಗೆ ತಿಳಿದಿರಬೇಕು ಎಂದರು.
ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನಾರಾಯಣ ಪವಾರ ಕೃತಿ ಪರಿಚಯಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ.ನಾಗಾಬಾಯಿ ಬುಳ್ಳಾ, ವಿಶ್ವ ಪ್ರಕಾಶನದ ಉಷಾ ನಾಯಕ, ಕಸಾಪ ಕರ‍್ಯರ‍್ಶಿ ಶಿವರಾಜ ಅಂಡಗಿ, ಸಾಹಿತಿ ಸಿ.ಎಸ್.ಆನಂದ, ಡಾ.ಆನಂದ ನಾಯಕ, ಸಂಜುಕುಮಾರ ಚವ್ಹಾಣ್, ರಾಜೇಂದ್ರ ಮಾಡಬೂಳ, ರ‍್ಮರಾಜ ಜವಳಿ ಇತರರಿದ್ದರು.