ಕಥೆಗಳಲ್ಲಿ ಜೀವನದ ಚಿತ್ರಣ

17 yerriswamy 01
Published on
  • .
  • ಬಳ್ಳಾರಿ : ಮನುಷ್ಯ ಬದುಕಿನ ತಾಕಲಾಟ ಹಾಗೂ ನಿತ್ಯ ತಲ್ಲಣಗಳನ್ನು ಕಥೆಗಳಲ್ಲಿ ಸೂಕ್ಷ್ಮ ವಾಗಿ ಹಿಡಿದಿಟ್ಟಿದ್ದಾರೆ ಎಂದ. ಬಿಎಂಸಿಆರ್‌ಸಿಯ ಹಿರಿಯ ವೈದ್ಯಾಧಿಕಾರಿ ಡಾ. ದಿನೇಶ ಗುಡಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಒಲವು ಬರಹ ಸಹಯೋಗದೊಂದಿಗೆ ನಡೆದ ಹೊಸ ಓದು ಸರಣಿಯಲ್ಲಿ ಲೇಖಕ ಜಿ. ಪ್ರವೀಣಕುಮಾರ ಅವರ ಎಡೆ ಕಥಾ ಸಂಕಲನದ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು. ಸಾಮಾಜಿಕ ಅಸಮಾನತೆ, ವೈಚಾರಿಕ ಪ್ರಜ್ಞೆ ಕಥೆಗಳುದ್ದಕ್ಕೂ ಹಾಸುಹೊಕ್ಕಾಗಿದೆ. ನೆಲದ ಭಾಷೆಯ ಸೊಗಡು ಕಥೆಗಳಿಗೆ ಮೆರುಗು ತಂದಿದೆ, ಕಥೆಗಳು ಓದಿಸಿಕೊಂಡು ಹೋಗುವ ಗುಣವನ್ನು ಪಡೆದುಕೊಂಡಿವೆ ಎಂದು ಬಣ್ಣಿಸಿದರು.
  • ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ, ಇಂತಹ ಕಾರ್ಯಕ್ರಮಗಳು ಲೇಖಕರನ್ನು ಪ್ರೋತ್ಸಾಹಿಸುವುದರ ಜತೆಗೆ ಲೇಖಕರ ಕೃತಿಗಳ ಒಳನೋಟ, ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಹೊಸ ಓದು ಸರಣಿಯದ್ಧಾಗಿದೆ ಎಂದರು.
  • ಗೋಡೆ ಶಿವರಾಜ್, ಸಂಜೀವಪ್ಪ , ಕಥೆಗಾರ ಜಿ. ಪ್ರವೀಣ ಕುಮಾರ ಮಾತನಾಡಿದರು.
  • ಪ್ರಮುಖರಾದ ಎನ್. ಡಿ. ವೆಂಕಮ್ಮ , ಬಸವರಾಜ ಬಿಸ್ಲಳ್ಳಿ , ಡಾ. ದಿವ್ಯಾ, ಲಕ್ಷ್ಮೀ ಪವನಕುಮಾರ, ಮಲ್ಲಿಕಾರ್ಜುನ, ಹನುಮಂತಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net