ಕತ್ತು ಸೀಳಿ ಕುರಿಗಳ ಕೊಲೆ

WhatsApp Image 2023-10-07 at 07.09.35
Published on

ಯಾದಗಿರಿ: ಹಟ್ಟಿಯಲ್ಲಿದ್ದ ಕುರಿಗಳ ಕತ್ತು ಹಾಗೂ ಹೊಟ್ಟೆ ಸೀಳಿ ಕೊಲೆ ಮಾಡಿದ ಘಟನೆ ಶಹಾಪುರ ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಗ್ರಾಮದ ಮಲ್ಲಪ್ಪ ನಂದಳ್ಳಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದಿದ್ದು, ಕಳೆದ ಕೆಲ ತಿಂಗಳ ಹಿಂದೆ ಸಂತೆಯಲ್ಲಿ ಸುಮಾರು 30 ಕುರಿ ಖರೀದಿಸಿದ್ದ. ಆನಾರೋಗ್ಯದ ನಿಮಿತ್ತ ಹಟ್ಟಿಯಲ್ಲಿ ಕುರಿಗಳನ್ನು ಬಿಟ್ಟು ತಾನು ಮನೆಯಲ್ಲಿ ಮಲಗಿದ್ದ ವೇಳೆ ದುಷ್ಕಮರ್ಿಗಳು ಹೊಟ್ಟೆ ಹಾಗೂ ಕತ್ತಿಗೆ ಚೂರಿ ಹಾಕಿ 16ಕ್ಕೂ ಹೆಚ್ಚು ಕುರಿಗಳನ್ನು ಸಾಯಿಸಿದ್ದಾರೆ.

ಇದರಿಂದ ಲಕ್ಷಾಂತರ ರೂ.ನಷ್ಟವಾಗಿದ್ದು, ತನಗೆ ನ್ಯಾಯ ಒದಗಿಸಿ ಕೊಡುವಂತೆ ಕಣ್ಣೀರು ಹಾಕುತ್ತಿದ್ದಾನೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಪಶು ಇಲಾಖೆ ಉಪ ನಿದರ್ೇಶಕ ರಾಜು ದೇಶಮುಖ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಸಕರ್ಾರದಿಂದ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net