ಕತ್ತು ಕೊಯ್ದು ಮಹಿಳೆ ಕೊಲೆ

Published on

ಶ್ರೀನಿವಾಸಪುರ : ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಕೊಲೆ ನಡೆದ 6 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಳ್ಯದ ಶ್ರೀರಾಮರೆಡ್ಡಿ ಅವರ ಪತ್ನಿ ರೂಪಾ(38) ಕೊಲೆಯಾದ ಮಹಿಳೆ. ಆನಂದಪ್ಪ ನಾಯಕ್​(48) ಬಂಧಿತ.

ರೂಪಾ ಸೋಮವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿ ಹಸು ಮೇಯಿಸಲು ಹೋಗಿದ್ದರು. ಆದರೆ, ಸಂಜೆಯಾದರೂ ಮನೆಗೆ ವಾಪಸ್​ ಬಾರದ ಹಿನ್ನೆಲೆಯಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಚುರುವುನಹಳ್ಳಿ ಕಾಲುವೆ ಸಮೀಪ ಮಹಿಳೆ ರಕ್ತದ ಮಡುವಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕುಟುಂಬಸ್ಥರ ಮಾಹಿತಿ ಮೇರೆಗೆ ಪೊಲೀಸರು ಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಲೆ ಎಂಬ ಶಂಕೆ ಮೇರೆಗೆ ಕೋಲಾರ ಎಸ್​ಪಿ ನಿಖಿಲ್​ ಹಾಗೂ ಡಿವೈಎಸ್ಪಿ ನಂದಕುಮಾರ್​ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ, ಪೊಲೀಸ್​ ಇನ್​ಸ್ಪೆಕ್ಟರ್​ ಗೊರವನಕೊಳ್ಳ, ಸಬ್​ ಇನ್​ಸ್ಪೆಕ್ಟರ್​ ಜೈರಾಮ್​ ತಂಡದಿಂದ ಆರೋಪಿ ಆನಂದಪ್ಪ ನಾಯಕ್​ ಎಂಬುವವರನ್ನು ಬಂಧಿಸಿದ್ದಾರೆ.

ಅಕ್ರಮ ಸಂಬಂಧ ಕಾರಣ: ಪೊಲೀಸರು ಮೊದಲಿಗೆ ಮೊಬೈಲ್​ ಕಾಲ್​ ತನಿಖೆ ಒಳಪಡಿಸಿದಾಗ ಕೊಲೆ ಆರೋಪಿ ಸುಳಿವು ಸಿಕ್ಕಿದ್ದು, ಅದೇ ಗ್ರಾಮದ ಆನಂದಪ್ಪ ನಾಯಕ್​(48) ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದೇ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಪತ್ನಿ ರೂಪಾಗೆ ಸೋಮವಾರ ಮಧ್ಯಾಹ್ನ 3.10 ನಿಮಿಷಕ್ಕೆ ಕರೆ ಮಾಡಿದಾಗ ಮೊಬೈಲ್​ ಸ್ವಿಚ್ಡ್​ ಆ್​ ಆಗಿತ್ತು. ಆದರೆ, ಪತ್ನಿ ಹಾಗೂ ಆನಂದಪ್ಪ ನಾಯಕ್​ ಜತೆಗೆ ಹಣದ ವ್ಯವಹಾರ ಇತ್ತು. ಕೊಲೆ ಯಾವ ವಿಚಾರಕ್ಕೆ ನಡೆದಿದೆ ಎಂಬುದು ಪೊಲೀಸರ ತನಿಖೆ ನಂತರ ತಿಳಿಯಬೇಕಿದೆ.

| ಶ್ರೀರಾಮರೆಡ್ಡಿ, ಮೃತ ಮಹಿಳೆ ಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net