ಕತ್ತಿ ಕರ್ತೃತ್ವ ಶಕ್ತಿ ಎಲ್ಲರಿಗೂ ಮಾದರಿ

15-4
ಬೆಲ್ಲದ ಬಾಗೇವಾಡಿಯ ಸಚಿವ ಉಮೇಶ ಕತ್ತಿ ಅವರ ಮನೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಭೇಟಿ ನೀಡಿ ಸಾಂತ್ವನ ಹೇಳಿದರು. ಶೀಲಾ ಕತ್ತಿ, ನಿಖಿಲ ಕತ್ತಿ, ಸ್ನೇಹಾ ಕತ್ತಿ, ರಮೇಶ ಕತ್ತಿ, ಜಯಶ್ರೀ ಕತ್ತಿ, ಪೃಥ್ವಿ ಕತ್ತಿ, ಪವನ ಕತ್ತಿ ಇತರರಿದ್ದರು.
Published on

ಹುಕ್ಕೇರಿ, ಬೆಳಗಾವಿ: ರಾಜ್ಯದ ವಿಧಾನಸಭೆಯ ಹಿರಿಯ ಶಾಸಕರಾ ಗಿದ್ದ ಸಚಿವ ಉಮೇಶ ಕತ್ತಿ ಅವರ ಕಾರ್ಯ ವೈಖರಿ, ಕರ್ತೃತ್ವ ಶಕ್ತಿ ಎಲ್ಲರಿಗೂ ಮಾದರಿಯಾಗಿತ್ತು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಸಚಿವ ಉಮೇಶ ಕತ್ತಿ ಅವರ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾತ್ವಂನ ಹೇಳಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬ ಜನಪ್ರತಿನಿಧಿ ಸಚಿವ ಉಮೇಶ ಕತ್ತಿ ಅವರ ಕುರಿತು ಚರ್ಚಿಸುತ್ತಿದ್ದಾರೆ. ಅವರ ಅಕಾಲಿಕ ನಿಧನ ರಾಜಕೀಯ ಮೊಗಸಾಲೆಯಲ್ಲಿ ಮೌನ ಮೂಡಿಸಿದೆ ಎಂದರು.

ಶೀಲಾ ಕತ್ತಿ, ನಿಖಿಲ ಕತ್ತಿ, ಸ್ನೇಹಾ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಜಯಶ್ರೀ ಕತ್ತಿ, ಪೃಥ್ವಿ ಕತ್ತಿ, ಪವನ ಕತ್ತಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net