ಕತ್ತಲೆಯಿಂದ ಬೆಳಕಿನಡೆಗೆ ಸಾಗುವುದೇ ದೀಪೋತ್ಸವ

17 HBD 5
 ಹುಮನಾಬಾದ್‌ನ ಬೈರಾಗಿ ಮಠ ದಕ್ಷಿಣ ಮುಖಿ ಹನುಮಾನ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ಶನಿವಾರ ನಡೆದ ಸಹಸ್ರ ದೀಪೋತ್ಸವ ಕಾರ್ಯಕ್ರಮವನ್ನು ಶ್ರೀ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಉದ್ಘಾಟಿಸಿದರು. ಅಕ್ಷಯ ಪಾಟೀಲ್, ಪ್ರೇಮಾ ಪಾಟೀಲ್, ವಿದ್ಯಾ ಪಾಟೀಲ್, ಸುನೀತಾ ಜಾಧವ್ ಇತರರಿದ್ದರು.
Published on

ಹುಮನಾಬಾದ್: ಕಾರ್ತಿಕೋತ್ಸವ ಮಾಸ ಅತ್ಯಂತ ಪವಿತ್ರವಾಗಿದ್ದು, ದೀಪೋತ್ಸವ ಮೂಲಕ ದೇವರನ್ನು ಸ್ಮರಿಸುತ್ತ ಕತ್ತಲೆಯಿಂದ ಬೆಳಕಿನಡೆಗೆ ಸಾಗುವುದಾಗಿದೆ ಎಂದು ಸ್ಥಳೀಯ ಹಿರೇಮಠ ಸಂಸ್ಥಾನದ ಶ್ರೀ ರೇಣುಕ ವೀರ ಗಂಗಾಧರ ಶಿವಾಚಾರ್ಯರು ನುಡಿದರು.

ಪಟ್ಟಣದ ಹೊರವಲಯದಲ್ಲಿ ಸಮರ್ಥ ರಾಮದಾಸ ಮಹಾರಾಜ ಸ್ಥಾಪಿತ ಬೈರಾಗಿ ಮಠ ದಕ್ಷಿಣ ಮುಖಿ ಹನುಮಾನ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸಹಸ್ರ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕಾರ್ತಿಕ ಮಾಸ ಅತ್ಯಂತ ಶ್ರೇಷ್ಠವಾಗಿದ್ದು, ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ. ಈ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಎಂದರು.

ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷೆ ಪ್ರೇಮಾ ಆರ್.ಪಾಟೀಲ್ ಮಾತನಾಡಿ. ಕತ್ತಲೆಯಿಂದ ಬೆಳಕಿನ ಕಡೆಗೆ, ಅಕ್ಷನದಿಂದ ಜ್ಞಾನದಡೆಗೆ ಸಾಗುವುದು ದೀಪೋತ್ಸವದ ಉದ್ದೇಶವಾಗಿದೆ ಎಂದರು.

ದೀಪ ಪ್ರಜ್ವಲನದ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದ ಬಳಿಕ ದೇವಾಲಯ ಮುಂಭಾಗ ಸೇರಿ ಆವರಣದಲ್ಲಿ ನೂರಾರು ಮಹಿಳೆಯರು, ಮಕ್ಕಳು ಮಣ್ಣಿನ ಹಣತೆಯ ದೀಪಗಳನ್ನು ಹಚ್ಚಿ ದೇವರಿಗೆ ವಿಷೇಶ ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಇದಕ್ಕೂ ಮೊದಲು ಮಠದಲ್ಲಿರುವ ಹನುಮಾನ ಮೂರ್ತಿಗೆ ವಿಶೇಷವಾಗಿ ಅಲಂಕರಿಸಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ಪರಿವಾರದಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಕ್ಷಯ ಆರ್.ಪಾಟೀಲ್, ವಿದ್ಯಾ ಬಿ.ಪಾಟೀಲ್, ಸುನೀತಾ ಜಾಧವ್, ಗೀತಾ ಉದಗೀರೆ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ದೇವಾನಂದ ಘವಾಳಕರ, ಉಪಾಧ್ಯಕ್ಷ ಚಂದ್ರಕಾಂತ ನಿಶಾನದಾರ, ವೆಂಕಟ ಜಾಧವ್, ಸಂದೀಪ ನಿಶಾನದಾರ, ಅರ್ಚಕ ಮಹೇಳಿ ಕೋಳ್ಳಿ, ಓಂಕಾರ ನಾಗರೆ, ಆನಂದ ತೆಲಂಗ, ಗುಂಡಯ್ಯ ತೆಲಂಗ, ಸಂತೋಷ ಬಾಜಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net