ಕುತ್ತಿಗೆ ನೋವು ತಾಳಲಾರದೆ ವೃದ್ಧೆ ಆತ್ಮಹತ್ಯೆ

Published on

ವಿರಾಜಪೇಟೆ: ಕೆಲ ತಿಂಗಳಿನಿಂದ ಕುತ್ತಿಗೆ ನೋವಿನಿಂದ ಬಳಲುತಿದ್ದ ವೃದ್ದೆಯೊಬ್ಬರು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಗರದ ತಿಮ್ಮಯ್ಯ ಬಡಾವಣೆ ನಿವಾಸಿ ಚಿಟ್ಟಿಯಪ್ಪ ಅವರ ಪತ್ನಿ ರಾಣಿ ಚಿಟ್ಟಿಯಪ್ಪ (68) ಆತ್ಮಹತ್ಯೆ ಮಾಡಿಕೊಂಡವರು.

ಬೆಳಗ್ಗೆ 6 ಗಂಟೆೆಗೆ ಚಿಟ್ಟಿಯಪ್ಪ ಅವರು ಹಾಲು ತರಲೆಂದು ಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆಯಲ್ಲಿ ಮನೆ ಕೋಣೆಯೊಂದರಲ್ಲಿ ಛಾವಣಿಯ ಕಬ್ಬಿಣದ ಕೊಂಡಿಗೆ ಸೀರೆಯಿಂದ ರಾಣಿ ಚಿಟ್ಟಿಯಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಲು ತೆಗೆದುಕೊಂಡು ಮನೆಗೆ ಬಂದ ಚಿಟ್ಟಿಯಪ್ಪ ಅವರು ಪತ್ನಿ ಆತ್ಮಹತ್ಯೆಗೆ ಶರನಾಗಿರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಮಗ ಮದನ್ ದೇವಯ್ಯ ಅವರು ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net