

ಚನ್ನಪಟ್ಟಣ: ಕಣ್ವ ನಾಲೆ ಆಧುನೀಕರಣ ಕಾಮಗಾರಿ ಕಳಪೆ ಎಂಬುದನ್ನು ನಿರೂಪಿಸಲು ರೈತಸಂ ಸಿದ್ಧವಿದ್ದು, ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಗುಣಮಟ್ಟ ಸಾಬೀತುಪಡಿಸಲಿ ಎಂದು ರೈತಸಂದ ವಿಭಾಗೀಯ ಉಪಾಧ್ಯಕ್ಷ ಆಣಿಗೆರೆ ಮಲ್ಲಯ್ಯ ಸವಾಲು ಹಾಕಿದ್ದಾರೆ.
ವಿಜಯವಾಣಿ ಏ.9ರ ಸಂಚಿಕೆಯಲ್ಲಿ ಕಣ್ವ ನಾಲೆ ಆಧುನೀಕರಣ ಕಾಮಗಾರಿ ಕಳಪೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಇದರಲ್ಲಿ ಕಾವೇರಿ ನೀರಾವರಿ ನಿಗಮದ ಎಇಇ ಸುರೇಶ್ ಅವರು ಕಾಮಗಾರಿಯಲ್ಲಿ ಯಾವುದೇ ಲೋಪದೋಷ ಇಲ್ಲ ಎಂದು ಪ್ರತಿಕ್ರಿಯಿಸಿದರು. ಇವರ ಪ್ರತಿಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಪತ್ರಿಕೆಗೆ ತಿಳಿಸಿರುವ ಆಣಿಗೆರೆ ಮಲ್ಲಯ್ಯ, ರೈತರ ಉಪಯೋಗಕ್ಕಾಗಿ ಕೋಟ್ಯಂತರ ಹಣ ವ್ಯಯಿಸಿ ನಡೆಯುತ್ತಿರುವ ಬಹುನಿರೀತ ಕಾಮಗಾರಿ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಹಳ್ಳ ಹಿಡಿದಿದೆ. ಈ ಮಧ್ಯೆ ಇರುವ ಲೋಪದೋಷಗಳನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದನ್ನು ಬಿಟ್ಟು, ಲೋಪದೋಷ ಮುಚ್ಚಿಡುವುದು ಅಧಿಕಾರಿಗಳಿಗೆ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.
ಗ್ರಾಮೀಣರಿಗೆ ಮಾಡಿರುವ ದ್ರೋಹ: ಕಾವೇರಿ ನೀರಾವರಿ ನಿಗಮದ ವತಿಯಿಂದ ನಡೆಯುತ್ತಿರುವ ಕಣ್ವ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಹಲವೆಡೆ ಕಳಪೆ ಕಾಮಗಾರಿಯ ಸತ್ಯ ದರ್ಶನವಾಗುತ್ತಿದೆ. ನಾಲೆಯ ತೂಬುಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು, ನಾಲೆಯಿಂದ ನೀರು ಹೊರಬಂದ ಮೇಲೆ ವಿಭಾಗವಾಗಿ ಹರಿಯಲು ಛೇಂಬರ್ ಆಳವಡಿಸದೆ ನೀರು ಬಳಕೆಗೆ ಅನನುಕೂಲವಾಗುವ ರೀತಿ ನಿರ್ಮಿಸಲಾಗಿದೆ. ಇದರೊಂದಿಗೆ, ನಾಲೆಗೆ ಇಳಿದು ದನಕರುಗಳು ನೀರು ಕುಡಿಯಲು ಹಾಗೂ ಮಹಿಳೆಯರು ಬಟ್ಟೆ ಪಾತ್ರೆ ತೊಳೆಯಲು ಸೋಪಾನ ನಿರ್ಮಿಸದೆ ಇರುವುದು ಗ್ರಾಮೀಣ ಭಾಗದ ಜನತೆಗೆ ಮಾಡಿರುವ ದ್ರೋಹವಾಗಿದೆ ಎಂದು ಆಣಿಗೆರೆ ಮಲ್ಲಯ್ಯ ಆರೋಪಿಸಿದರು.
ಕಳಪೆ, ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ, ತಾಲೂಕಿನ ಆಣಿಗೆರೆ ಗ್ರಾಮದ ಬಳಿ ನಾಳೆ ಕಾಮಗಾರಿಗಾಗಿ ಇತ್ತೀಚೆಗೆ 4.8 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಲೋಕೋಪಯೋಗಿ ರಸ್ತೆಯನ್ನು ಹಾಳು ಮಾಡಲಾಗಿದೆ. ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿ, ರ್ನಿಲಕ್ಷ$್ಯ ಎದ್ದುಕಾಣುತ್ತಿದೆ. ಇಷ್ಟಾದರೂ ನಿಗಮದ ಅಧಿಕಾರಿ ಕಾಮಗಾರಿ ಗುಣಮಟ್ಟವನ್ನು ಸಮರ್ಥಿಸಿಕೊಳ್ಳುತ್ತಿರುವುದು ವಿಷಾಧನೀಯ ಎಂದಿದ್ದಾರೆ.