

ಕಲಬುರಗಿ: ನಗರದ ಸಂಘತ್ರಸವಾಡಿ ಮುಖ್ಯರಸ್ತೆಯಲ್ಲಿ ಯಾವುದೇ ಪ್ರಾಧಿಕಾರದ ಅನುಮತಿ ಇಲ್ಲದೆ, ಸಾರ್ವಜನಿಕರಿಗೆ ತೊಂದರೆ ಆಗುವಂತೆ ನಿರ್ಮಿಸಿರುವ ಅಕ್ರಮ, ಅನಧಿಕೃತ ಕಮಾನನ್ನು ತೆರವುಗೊಳಿಸಲು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ, ವಿವಿಧ ಹಿಂದುಪರ ಸಂಘಟನೆಗಳಿAದ ಮಹಾನಗರ ಪಾಲಿಕೆ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಮುಖ್ಯರಸ್ತೆಯಲ್ಲಿ ಬೃಹತ್ ಪ್ರಮಾಣದ ಕಾಮಗಾರಿ ನಡೆಯುತ್ತಿದ್ದು, ಯಾವುದಾದರೂ ಒಂದು ಇಲಾಖೆಯಿಂದ ಟೆಂಡರ್ ಆಗಬೇಕು, ಆದರೆ ಈ ಕಾಮಗಾರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಲೋಕೋಪಯೋಗಿ ಇಲಾಖೆ, ಕೆಕೆಆರ್‌ಡಿಬಿ, ಲ್ಯಾಂಡ್ ಆರ್ಮಿ, ಮಹಾನಗರ ಪಾಲಿಕೆ ಸೇರಿ ಯಾರೂ ಕಾಮಗಾರಿ ನಡೆಸಿಲ್ಲ. ಪಾಲಿಕೆ ಅನುಮತಿಯೂ ಇಲ್ಲ. ಯಾರು ಕಮಾನ್ ನಿರ್ಮಿಸಿದ್ದಾರೆ ಎಂಬ ಅರಿವು ಪಾಲಿಕೆಗೆ ಇಲ್ಲ. ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಯಾರಪ್ಪನ ಗಂಟಲ್ಲ ತೆರವು ಮಾಡಿ: ನಗರದ ಸಂಘತ್ರಸವಾಡಿ ಮುಖ್ಯ ರಸ್ತೆಯಲ್ಲಿ ಅನಧಿಕೃತ ಕಮಾನ್ ನಿರ್ಮಿಸಿದ್ದು, ಕಲಬುರಗಿ ಯಾರದ್ದೆ ಅಪ್ಪನ ಸ್ವತ್ತು ಅಲ್ಲ. ಎಲ್ಲೆಂದರಲ್ಲಿ ಕಮಾನ್ ಕಟ್ಟುವಂತಿಲ್ಲ. ಈ ಬಗ್ಗೆ ಸಿz್ದೆÃಶ್ವರ ಬಡಾವಣೆ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದರೂ, ಯಾರ ವಿರುದ್ಧವೂ ಕ್ರಮವಾಗಿಲ್ಲ. ತೆರವು ಮಾಡಬೇಕು ಎಂದು ಬಿಜೆಪಿ ನಗರಾಧ್ಯP್ಷÀ ಚಂದು ಪಾಟೀಲ್ ಆಗ್ರಹಿಸಿದರು.
ಶಾಸಕ ಬಸವರಾಜ ಮತ್ತಿಮಡು, ಮಾಜಿ ಮೇಯರ್ ವಿಶಾಲ ದರ್ಗಿ, ಪ್ರಮುಖರಾದ ಅಣ್ಣಪ್ಪ ಶಿವಘೋಳ, ಸಂಗಪ್ಪ ಬಿರಾದಾರ, ಸಿದ್ರಾಮಪ್ಪ ಪಾಟೀಲ್, ಶಶಿಕಾಂತ ಕುಲಕರ್ಣಿ, ಶರಣು ಕೆ., ನಾಗೇಶ ಬಿ.ಕೆ., ಶರಣು ಸಿನ್ನೂರ, ಎಂ.ಎಸ್.ಪಾಟೀಲ್ ನರಿಬೋಳ, ಸಿದ್ದು ಹಿರೇಮಠ, ಮಹಾದೇವಯ್ಯ ಕರದಳ್ಳಿ, ಶಿವರಾಜ ಸಂಗೋಳಗಿ, ಪ್ರಶಾಂತ ಗುಡ್ಡಾ, ಲಕ್ಷಿö್ಮÃಕಾಂತ ಸ್ವಾದಿ, ರಾಜು ನವಲದಿ, ಸಿದ್ದರಾಜ ಬಿರಾದಾರ, ಗುರುಶಾಂತ ಟೆಂಗಳಿ, ದಿವ್ಯ ಹಾಗರಗಿ, ಮಹೇಶ ಗೊಬ್ಬುರ, ಮಹೇಶ ಕೆಂಭಾವಿ, ಸತೀಶ ಮಾವೂರ, ದಯಾನಂದ ಪಾಟೀಲ್, ಆನಂದ ಕಣಸೂರ, ಶ್ರೀಶೈಲ ಮೂಲಗೆ, ಮಂಜುನಾಥ ಪಾಟೀಲ್, ಮಂಜು ಕಳಸಕಸರ್, ಗುಂಡು ಪಾಟೀಲ್ ಇತರರಿದ್ದರು.