ಕಣ್ಮರೆ ಮಕ್ಕಳ ಪತ್ತೆ ಕಾರ್ಯ ಚುರುಕು

CTD MAKKALA PATTE--0006
Published on

ಚಿತ್ರದುರ್ಗ: ಜಿಲ್ಲಾ ವ್ಯಾಪ್ತಿಯಲ್ಲಿ ಕಾಣೆಯಾದ ಮಕ್ಕಳ ಪತ್ತೆ ಕಾರ‌್ಯ ಚುರುಕುಗೊಳಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ, ನ್ಯಾಯಾಧೀಶ ಎಂ.ವಿಜಯ್ ತನಿಖಾಧಿಕಾರಿಗಳಿಗೆ ಸೂಚಿಸಿದರು.
ಕಾಣೆಯಾದ ಮಕ್ಕಳ ಪತ್ತೆ ಕುರಿತಂತೆ ನಗರದ ಬಾಲಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾಲಕರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಾಣೆಯಾದ ಮಕ್ಕಳ ಪತ್ತೆಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಈ ಕುರಿತು ವರದಿ ಪಡೆಯಲಿದೆ. ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಡೆಗಟ್ಟಲು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
2021 ರಿಂದ 2024 ವರೆಗೆ ಜಿಲ್ಲೆಯಲ್ಲಿ 335 ಮಕ್ಕಳ ಕಾಣೆ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 330 ಪಕ್ರರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಇದೇ ಅವಧಿ ಪಾಲಕರೊಂದಿಗೆ ಕಾಣೆಯದ 127 ಮಕ್ಕಳ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 123ರ ಪಕ್ರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಪತ್ತೆಯಾಗದ 5 ಪೈಕಿ 2023ರಲ್ಲಿ ದಾಖಲಾದ 3 ಪ್ರಕರಣಗಳನ್ನು ಜಿಲ್ಲಾ ಮಾನವ ಕಳ್ಳಸಾಗಣಿಕೆ ಘಟಕ್ಕೆ ವರ್ಗಾವಣೆ ಮಾಡಲಾಗಿದೆ. 2024ರಲ್ಲಿ ದಾಖಲಾದ 2ರ ಪೈಕಿ ಒಂದು ಪ್ರಕರಣದಲ್ಲಿ ಕಾಣೆಯಾದ ಮಗು ಪತ್ತೆಯಾಗಿದೆ. ಪಾಲಕರೊಂದಿಗೆ ಕಾಣೆಯಾದ ಪ್ರಕರಣಗಳಲ್ಲಿ ಪತ್ತೆಯಾಗದ 4ರ ಪೈಕಿ 1 ಮಗುವನ್ನು ಪತ್ತೆ ಹಚ್ಚಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಸವಿತಾ, ಡಿವೈಎಸ್ ಪಿ.ಕೆ.ದಿನಕರ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ್, ಗುರುಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net