ಕಣ್ಣುಗಳ ರಕ್ಷಣೆಗೆ ಅತ್ಯಗತ್ಯ

oppo_2
oppo_2
Published on

ಮದ್ದೂರು: ಕಣ್ಣುಗಳು ದೇಹದ ಅವಿಭಾಜ್ಯ ಅಂಗವಾಗಿದ್ದು, ಅವುಗಳ ರಕ್ಷಣೆಗೆ ಅತ್ಯಗತ್ಯ ಎಂದು ಸುಮುಖ ನಿಧಿ ಲಿಮಿಟೆಡ್ ಅಧ್ಯಕ್ಷ ಕುಂದನಕುಪ್ಪೆ ಕುಮಾರ್ ತಿಳಿಸಿದರು.

ತಾಲೂಕಿನ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸುಮುಖ ಸೇವಾ ಟ್ರಸ್ಟ್, ಸುಮುಖ ನಿಧಿ ಲಿಮಿಟೆಡ್, ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ಮತ್ತು ಕೆಸ್ತೂರು ಪೊಲೀಸ್ ಠಾಣೆ ಸಿಬ್ಬಂದಿ ವತಿಯಿಂದ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸುಂದರವಾದ ಪ್ರಪಂಚವನ್ನು ನೋಡಲು ಕಣ್ಣು ಅತ್ಯಗತ್ಯವಾಗಿದ್ದು, ಕಣ್ಣುಗಳು ಇಲ್ಲದೆ ಹೋದರೆ ಪ್ರಪಂಚ ಕತ್ತಲಮಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಣ್ಣುಗಳ ರಕ್ಷಣೆಗೆ ಮುಂದಾಗಬೇಕೆಂಬ ಉದ್ದೇಶದಿಂದ ಗ್ರಾಮಾಂತರ ಪ್ರದೇಶದಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಂಡು ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಶಿಬಿರದಲ್ಲಿ 100 ಹೆಚ್ಚು ಜನ ತಪಾಸಣೆಗೆ ಒಳಪಟ್ಟು 50ಕ್ಕೂ ಹೆಚ್ಚು ಜನರನ್ನು ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಕಳುಹಿಸಿ ಕೊಡಲಾಯಿತು ಎಂದರು.

ಕೆಸ್ತೂರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ನರೇಶ್‌ಕುಮಾರ್, ಮುಖಂಡರಾದ ಕೊಕ್ಕರೆ ಬೆಳ್ಳೂರು ಮಹೇಶ್, ಸಿದ್ದರಾಜು, ಕೇಬಲ್ ಸತೀಶ್, ಕುಂದನಕುಪ್ಪೆ ಕೃಷ್ಣೇಗೌಡ, ಅಶೋಕ್, ರಾಜೇಂದ್ರ, ಭಾಗ್ಯಮ್ಮ, ಮೆಡಿಕಲ್ ಜಗದೀಶ್, ಪುಟ್ಟಸ್ವಾಮಣ್ಣ, ಶಂಕರ್, ಡಾ.ಮಾಳವೀಕಾ, ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net