ಕಣ್ಣುಗಳ ದಾನದಿಂದ ಬದುಕು ಸಾರ್ಥಕ

CTD NETRADANA PAKSSHIKA
Published on

ಚಿತ್ರದುರ್ಗ: ನೇತ್ರದಾನದಿಂದ ಬದುಕು ಸಾರ್ಥಕವಾಗುತ್ತದೆ ಎಂದು ಜಿಲ್ಲಾಸ್ಪತ್ರೆ ನೇತ್ರ ತಜ್ಞೆ ಡಾ.ಶಿಲ್ಪಾ ಹೇಳಿದರು. ಆರೋಗ್ಯ ಇಲಾಖೆ,ಜಿಲ್ಲಾ ಅಂಧತ್ವ ನಿಯಂತ್ರಣ ಕಚೇರಿ,ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಚಿತ್ರದುರ್ಗ ತಾಲೂಕು ಗೋನೂರು ನಿರಾಶ್ರೀತರ ಪು ನರ್ವಸತಿ ಕೇಂದ್ರದಲ್ಲಿ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ,ಕಣ್ಣುಗಳ ದಾನದಿಂದ ಇಬ್ಬರು ದೃಷ್ಟಿ ಹೀನರ ಬಾಳಿಗೆ ಬೆಳಕಾಗಬಹುದಾಗಿದೆ ಎಂದರು.
ಜಿಲ್ಲಾಸ್ಪತ್ರೆ ನೇತ್ರತಜ್ಞ ಡಾ.ಬಿ.ಜಿ.ಪ್ರದೀಪ್ ಅವರು ನೇತ್ರದಾನ ಜಾಗೃತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ,ನೇತ್ರ ದಾನದೆಡೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ನೇತ್ರದಾನದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ,ಸತ್ಯವನ್ನು ಜನರಿಗೆ ತಿಳಿಸುವುದು,ಮರಣದ ನಂತರ ನೇತ್ರದಾನಕ್ಕೆ ಪ್ರೇರೇಪಿಸುವುದಾಗಿದೆ ಪಾಕ್ಷಿಕದ ಉದ್ದೇಶವಾಗಿದೆ. ವ್ಯಕ್ತಿ ಮರಣಾನಂತರ ಕಣ್ಣುಗಳನ್ನು ವ್ಯರ್ಥ ಮಾಡಬಾರದು. ಪ್ರತಿಯೊಬ್ಬರೂ ನೇತ್ರದಾನದ ಸಂಕಲ್ಪ ಮಾಡಬೇಕೆಂದರು.
ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ನೇತ್ರಾಧಿಕಾರಿ ರಾಮು ಮಾತನಾಡಿದರು. ಶಿಬಿರದಲ್ಲಿ ತಪಾಸಣೆಗೆ ಒಳಗಾದ 371ಜನರ ಪೈಕಿ 20 ಜನರ ನೇತ್ರ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಯಿತು. ನಿರಾಶ್ರೀತರ ಕೇಂದ್ರದ ಆಪ್ತಸಮಾಲೋಚಕ ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಅಧೀಕ್ಷಕ ವಿಜಯಕು ಮಾರ್,ನೇತ್ರಾಧಿಕಾರಿ ಪುಷ್ಪಲತಾ, ಜಿಲ್ಲಾಸ್ಪತ್ರೆ ಶುಶ್ರೂಷಕಿ ಲಕ್ಷ್ಮೀ,ಯೋಗ ಗುರು ರವಿ ಕೆ.ಅಂಬೇಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net