`ಕಣ್ಣೀರಿನ ಅಕ್ಷರಗಳು' ಪುಸ್ತಕ ಬಿಡುಗಡೆ ಇಂದು

7Athni2
Published on

ಅಥಣಿ: ಪಟ್ಟಣದ ಜೆ.ಎ ಪದವಿಪೂರ್ವ ಮಹಾವಿದ್ಯಾಲಯ ಸಭಾಂಗಣದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆ ಮತ್ತು ಸಾಹಿತ್ಯ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಡಾ.ಅಪ್ಪಾಸಾಬ ಪೂಜಾರಿ ರಚಿಸಿದ ಕಣ್ಣೀರಿನ ಅಕ್ಷರಗಳು ಪುಸ್ತಕ ಬಿಡುಗಡೆ ಹಾಗೂ ಗುರುವಂದನೆ ಕಾರ್ಯಕ್ರಮ ಮೇ ೮ರಂದು ಬೆಳಗ್ಗೆ ೧೦.೩೦ ಗಂಟೆಗೆ ಜರುಗಲಿದೆ ಎಂದು ಮುಖಂಡ ಅರವಿಂದರಾವ ದೇಶಪಾಂಡೆ ತಿಳಿಸಿದರು.

ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಧವಜಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಅನುರಾಧಾ ಅರವಿಂದರಾವ ದೇಶಪಾಂಡೆ ದಂಪತಿ ಆಗಮಿಸುವರು. ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಪುಸ್ತಕ ಬಿಡುಗಡೆ ಮಾಡುವರು. ಎನ್.ಬಿ.ಝೆರೆ ಕೃತಿ ಪರಿಚಯಿಸುವರು. ಎಸ್.ಕೆ. ಕುಲಕರ್ಣಿ, ದುಷ್ಯಂತ ನಾಡಗೌಡ, ಬಿ.ಎ.ನಾವಲಗಟ್ಟಿ, ಆರ್.ಆರ್. ಒಡೆಯರ, ಎಸ್.ಎಂ. ಗೌಡರ, ಎಂ.ಬಿ. ಚರಂತಿಮಠ ಅವರಿಗೆ ಗುರುವಂದನೆ ಜರುಗಲಿದೆ ಎಂದರು.

ರವಿ ಕುಲಕರ್ಣಿ, ಸಂದೀಪ ಸಂಗೊರಾಮ, ಎಂ.ಪಿ. ಮೇತ್ರಿ, ಆರ್.ಎಂ. ದೇವರೆಡ್ಡಿ, ಎನ್.ಬಿ. ಝೆರೆ, ಬಿ.ಎಸ್.ಲೋಕೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net