ಕಣ್ಣಿನ ಸೋಂಕು ,ಮುಂಜಾಗ್ರತೆಗೆ ಡಿಎಚ್‌ಒ ಸಲಹೆ

CTD 10 DHO DR.Ranghanath---006
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಹಲವರಿಗೆ ಮದ್ರಾಸ್ ಐ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿದ್ದು,ಶಾಲಾ ಮಕ್ಕಳು,ವಸತಿ ಗೃಹದ ವಿದ್ಯಾ ರ್ಥಿಗಳಲ್ಲಿ ಈ ಸೋಂಕು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗಳು ಮತ್ತು ವಸತಿ ಶಾಲೆಗಳಲ್ಲಿ ಮುಂಜಾಗ್ರತೆಯ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ ತಿಳಿಸಿದ್ದಾರೆ.

ಈ ವೈರಾಣು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು,ಕಣ್ಣಿನಲ್ಲಿ ನೀರು ಬರುವು ದು ಇತ್ಯಾದಿ ತೊಂದರೆಗಳಾಗುತ್ತಿವೆ. ಸೋಂಕಿರುವ ವಿದ್ಯಾರ್ಥಿಗಳಿಗೆ ರಜೆ ನೀಡ ಬೇಕು. ಸೋಂಕಿತರು ಸೂಕ್ತ ಚಿಕಿತ್ಸೆ ಪಡೆಯ ಬೇಕು. ವೈ ದ್ಯರ ಸಲಹೆ ಇಲ್ಲದೆ ಔಷಧ ಬಳಸಬಾರದು. ಆಗಾಗ್ಗೆ ಕೈಗಳ್ಳನ್ನು ಸ್ವಚ್ಛಗೊಳಿಸುವುದರೊಂದಿಗೆ ಕನ್ನಡಕ ಧರಿಸ ಬೇಕೆಂದು ರಂಗನಾಥ್ ಸಲಹೆ ನೀಡಿದ್ದಾರೆ.

(ಸಿಟಿಡಿ 26 ಡಾ.ಆರ್.ರಂಗನಾಥ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net