

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ಭಾನುವಾರ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಬಿರಕ್ಕೆ ಬೆಂಗಳೂರಿನ ಲಯನ್ಸ್ ವೆಸ್ಟ್ ಕಣ್ಣಿನ ಆಸ್ಪತ್ರೆಯ ಡಾ.ಹರ್ಷಿತಾ ಚಾಲನೆ ನೀಡಿದರು.
ದೇಹದಲ್ಲಿ ಅಂಗಗಳಲ್ಲಿ ಕಣ್ಣು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಹಾಗಾಗಿ ಕಣ್ಣಿನ ಸುರಕ್ಷತೆ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕು. ಸಣ್ಣ ಸಮಸ್ಯೆಗಳು ತಿಳಿದರೂ ಸಕಾಲಕ್ಕೆ ತಪಾಸಣೆ, ಚಿಕಿತ್ಸೆ ಅಗತ್ಯವಿರುತ್ತದೆ. ಕಣ್ಣಿನ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷೃ ಧೋರಣೆ ತಾಳದೆ ವ್ಯೆದ್ಯರಿಂದ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ಇದುವರೆವಿಗೂ ಲಯನ್ಸ್ ಕ್ಲಬ್ ವತಿಯಿಂದ 236 ಶಿಬಿರಗಳು ನಡೆದಿವೆ. 107730 ಜನರು ತಪಾಸಣೆಗೆ ಒಳಪಟ್ಟಿದ್ದಾರೆ. ಇವರಲ್ಲಿ 11051 ಜನರಿಗೆ ಶಸ್ತ್ರಚಿಕಿತ್ಸೆ ಸೌಲಭ್ಯ ಕೊಡಿಸಲಾಗಿದೆ. ಕಣ್ಣಿನ ಚಿಕಿತ್ಸೆಗೆ ಒಳಗಾದ ನಿಮ್ಮ ಪರಿಚಿತ ಜನರನ್ನು ಕರೆತಂದು ಕಣ್ಣಿನ ಚಿಕಿತ್ಸೆ ಕೊಡಿಸಬೇಕೆಂದು ತಿಳಿಸಿದರು ಶಿಬಿರದಲ್ಲಿ 60 ಜನರು ತಪಾಸಣೆಗೆ ಒಳಪಟ್ಟರು ಈ ಪೈಕಿ 52 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಶಿಬಿರದಲ್ಲಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಸ್. ನಾಗರಾಜು ಕೊಂಗರಹಳ್ಳಿ, ಸತೀಶ್, ಸಂಸ್ಥಾಪನ ಕಾರ್ಯದರ್ಶಿ ಗಿರಿರಾಜು ಇದ್ದರು.