

ಸಾಲಿಗ್ರಾಮ: ಪ್ರತಿಯೊಬ್ಬರೂ ಕಣ್ಣಿನ ರಕ್ಷಣೆಗೆ ಹೆಚ್ಚು ಒತ್ತು ನೀಡಿಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.
ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಯೂತ್ ಕಾಂಗ್ರೆಸ್ ಮುಖಂಡ ಮಿರ್ಲೆ ನಂದೀಶ್ ಅವರು ಶಂಕರ ಆಸ್ಪತ್ರೆ ಮತ್ತು ಜಿಲ್ಲಾ ಅಂದತ್ವ ಸಂಸ್ಥೆಯ ಸಹಯೊಗದೊಂದಿಗೆ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಬದುಕಿನಲ್ಲಿ ಅತ್ಯಾಮೂಲ್ಯವಾದ ಅಂಗವೆಂದರೆ ಅದು ಕಣ್ಣು. ಕಣ್ಣು ಇಲ್ಲದೆ ಬದುಕಿನ ಸಾಧನೆ ಅಸಾಧ್ಯ. ಹಾಗಾಗಿ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ನಾವು ಇದ್ದಷ್ಟು ದಿನ ಹೇಗೆ ಬದುಕು ಸಾಗಿಸಿದವು ಎನ್ನುವುದು ಮುಖ್ಯವಲ್ಲ. ನಮ್ಮಿಂದ ಯಾರಿಗೆ ಸಹಾಯವಾಗಿತು. ಮತ್ತೊಬ್ಬರಿಗೆ ನಮ್ಮಿಂದ ಆದ ಸಹಾಯ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತ ನಂದೀಶ್ ಅವರ ಸಹಯೋಗದಲ್ಲಿ ಆಯೋಜಿಸಿರುವ ಕಣ್ಣಿನ ತಪಾಸಣಾ ಶಿಬಿರ ಉತ್ತಮ ಕೆಲಸ ಎಂದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಗೆ ಒಳಗಾದರು. 35 ಜನರನ್ನು ಕಣ್ಣಿನ ಚಿಕಿತ್ಸೆಗಾಗಿ ಸೋಮವಾರ ಬೆಂಗಳೂರಿನ ಕಣ್ಣಿನ ಶಂಕರ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಗ್ರಾಮ ಪಂಚಾಯಿತಿ ಸದಸ್ಯ ಎಂ.ಆರ್.ಹರೀಶ್, ಮುಖಂಡರಾದ ದೀಪು, ಅಂಕನಹಳ್ಳಿ ಗೋವಿಂದಣ್ಣ, ಭರತ್, ಲಕ್ಕಿಕುಪ್ಪೆ ಮಂಜು, ಪರೀಕ್ಷಿತ್ ಗಂಧನಹಳ್ಳಿ ವೆಂಕಟೇಶ್, ಜಯಂತ್, ಮಂಚನಹಳ್ಳಿ ರವಿ ಇತರರು ಇದ್ದರು.